ಇತರೆ

ಮಹಿಳೆ ಕೊಲೆಗೈದು ತುಂಡು ತುಂಡಾಗಿ ಕತ್ತರಿಸಿದ ಪ್ರಕರಣ: ಮರಣೋತ್ತರ ವರದಿ ಸಲ್ಲಿಕೆ 

Views: 130

ಬೆಂಗಳೂರು:ಮಹಿಳೆ ಕೊಲೆಗೈದು ತುಂಡು ತುಂಡಾಗಿ ಕತ್ತರಿಸಿದ ಪ್ರಕರಣ ಸಂಬಂಧ ವೈದ್ಯರಿಂದು ಮರಣೋತ್ತರ ಪರೀಕ್ಷೆಯ ವರದಿಯನ್ನು ತನಿಖಾಧಿಕಾರಿಗಳಿಗೆ ಸಲ್ಲಿಸಿದ್ದಾರೆ.

ಮತ್ತೊಂದೆಡೆ ವೈಯಾಲಿಕಾವಲ್ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಕೃತ್ಯ ನಡೆದ ಸ್ಥಳದ ತಪಾಸಣೆಯಲ್ಲಿ, ಫ್ರಿಡ್ಜ್ ಮೇಲೆ ಹಲವು ಬೆರಳಚ್ಚಿನ ಗುರುತುಗಳು ಪತ್ತೆ ಆಗಿರುವುದು ಗೊತ್ತಾಗಿದೆ.

ಈ ಬಗ್ಗೆ ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರಿಂದ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ. ಇದರಿಂದ ಮಹಾಲಕ್ಷ್ಮಿ ಕೊಲೆ ಹಿಂದೆ ಹಂತಕ ಒಬ್ಬನೆ ಇದ್ದಾನಾ ಅಥವಾ ಇಬ್ಬರು ಇದ್ದಾರಾ ಎನ್ನುವ ಬಗ್ಗೆ ಶಂಕೆ ಹುಟ್ಟಿಕೊಂಡಿದ್ದು,ಎಫ್‌ಎಸ್‌ಎಲ್ ತಜ್ಞರು ಶೋಧ ಮುಂದುವರಿಸಿದ್ದಾರೆ.

ಪ್ರಕರಣದ ಸಂಬಂಧ ಶಂಕಿತ ಹಂತಕನ ಸಹೋದರನನ್ನು ಕರೆತಂದು ಸುಮಾರು 2 ಗಂಟೆಗಳ ಕಾಲ ನಡೆದ ವಿಚಾರಣೆಯಲ್ಲಿ ಹಲವು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಕೊಲೆ ಮಾಡಿ ಕರೆ ಮಾಡಿದ್ದರ ಬಗ್ಗೆ ಶಂಕಿತ ಹಂತನ ಸಹೋದರ ಮಾಹಿತಿ ನೀಡಿರೋದಾಗಿಯೂ ತಿಳಿದುಬಂದಿದೆ.

ಸುಮಾರು30 ತುಂಡುಗಳನ್ನಾಗಿ ಕತ್ತರಿಸಿದ ಬಳಿಕ ಸಹೋದರನಿಗೆ ಕಾಲ್ ಮಾಡಿ ಹೇಳಿದ್ದ ಬಗ್ಗೆಯೂ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.

ಮಹಾಲಕ್ಷ್ಮಿ ಕೊಲೆ ಪ್ರಕರಣದ ಶಂಕಿತ ಹಂತಕ ಕಳೆದ 6 ತಿಂಗಳ ಹಿಂದೆಯಷ್ಟೇ ಕೆಲಸ ಬಿಟ್ಟಿದ್ದ. ಕೊಲೆಯಾಗಿರುವ ಮಹಾಲಕ್ಷ್ಮಿ ಹಾಗೂ ಶಂಕಿತ ಹಂತಕ ಒಂದೇ ಕಡೆ ಕೆಲಸ ಮಾಡುತ್ತಿದ್ದರು.

ಇಬ್ಬರ ನಡುವಿನ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿದ್ದ ಕಾರಣಕ್ಕೆ ಶಂಕಿತ ಹಂತಕ ಭೀಕರವಾಗಿ ಕೊಲೆ ಮಾಡಿರುವುದಾಗಿ ಪ್ರಾಥಮಿಕ ಹಂತದಲ್ಲಿ ತಿಳಿದುಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮರಣೋತ್ತರ ಪರೀಕ್ಷೆ ವೇಳೆ, 59 ತುಂಡಾಗಿ ಕತ್ತರಿಸಲಾಗಿದೆ ಎಂಬುದು ದೃಢಪಟ್ಟಿದೆ. ಅಲ್ಲದೆ, ಮಹಿಳೆಯ ತಲೆಯನ್ನೂ ಮೂರು ಭಾಗವಾಗಿ ಮಾಡಿದ್ದು, ಮಹಿಳೆಯ ಕಾಲುಗಳನ್ನು ಕತ್ತರಿಸಲಾಗಿತ್ತು. ಕರುಳು, ತಲೆಯ ಕೂದಲು ಸೇರಿದಂತೆ ಇತರೆ ಭಾಗಗಳನ್ನು ಪ್ಲಾಸ್ಟಿಕ್‌ನಲ್ಲಿ ತುಂಬಿ ಇಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಈ ಪ್ರಕರಣದಲ್ಲಿ ಹಂತಕ ಸಡೋಮಾಸೋಕಿಸ್ಟಿಕ್ ಪ್ರವೃತ್ತಿಯನ್ನು ಹೊಂದಿರುವ ಸಾಧ್ಯತೆಗಳನ್ನು ತೋರಿಸುತ್ತಿದೆ

Related Articles

Back to top button
error: Content is protected !!