ಜನಮನ

ಮನೆ ಸ್ವಚ್ಛಗೊಳಿಸುವಾಗ 5ನೇ ಮಹಡಿ ಮೇಲಿನಿಂದ ಬಿದ್ದು ಮಹಿಳೆ ದಾರುಣ ಸಾವು

Views: 1

ಬೆಂಗಳೂರು: ಮನೆ ಸ್ವಚ್ಛಗೊಳಿಸುವಾಗ ಕಾಲು ಜಾರಿ 5ನೇ ಮಹಡಿಯಿಂದ ಬಿದ್ದು ಗೃಹಿಣಿ ಸಾವನ್ನಪ್ಪಿರುವ ಘಟನೆ ಕಾಡುಗುಡಿಯ ದೊಡ್ಡಬನಹಳ್ಳಿಯಲ್ಲಿನ ವಿಂಧ್ಯಗಿರಿ ಅಪಾರ್ಟ್​​​ಮೆಂಟ್​ನಲ್ಲಿ ನಡೆದಿದೆ.

ಖೂಷ್ಬು ಅಶೀಷ್ ತ್ರಿವೇದಿ (31) ಸಾವನ್ನಪ್ಪಿರುವ ಮಹಿಳೆ. ವಿಂಧ್ಯಗಿರಿ ಅಪಾರ್ಟ್​​​ಮೆಂಟ್​ನಲ್ಲಿ ವಾಸವಿರುವ ಈಕೆ, ಎಂದಿನಂತೆ ತಮ್ಮ ಮನೆ ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆ ಕಾಲು ಜಾರಿದ್ದು ಕಿಟಕಿ ಮೂಲಕ 5ನೇ ಮಹಡಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಇನ್ನು ಈ ಸಂಬಂಧ ಕಾಡುಗೋಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Related Articles

Back to top button
error: Content is protected !!