ಇತರೆ

ಮನೆ ಕೆಲಸದವನಿಗೆ ಸುಪಾರಿ ಕೊಟ್ಟು ಮಾವನನ್ನೇ ಕೊಲ್ಲಿಸಿದ ಸೊಸೆ!

Views: 173

ಕನ್ನಡ ಕರಾವಳಿ ಸುದ್ದಿ: ಪಾರ್ಟಿ ಹಾಗೂ ಖರ್ಚಿನ ವಿಷಯಕ್ಕೆ ಪದೇ ಪದೇ ಕಿರಿಕಿರಿ ಮಾಡುತ್ತಿದ್ದ ಮಾವನ ಕಿರುಕುಳ ತಾಳಲಾರದೆ, ಸೊಸೆಯೇ ಮಾಜಿ ಮನೆ ಕೆಲಸದವನಿಗೆ ಸುಪಾರಿ ನೀಡಿ ಭೀಕರವಾಗಿ ಕೊಲೆ ಮಾಡಿಸಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

ಕೊಲೆಯಾದವರನ್ನು ಪ್ರಸಿದ್ಧ ಔಷಧ ಉದ್ಯಮಿ ವಿನೀತ್ ಮಿನೋಚಾ (63) ಎಂದು ಗುರುತಿಸಲಾಗಿದೆ. ಅವರು ರಾತ್ರಿ ತಮ್ಮ ಅಪಾರ್ಟ್‌ಮೆಂಟ್‌ನಲ್ಲೇ 26 ಬಾರಿ ಇರಿತಕ್ಕೊಳಗಾಗಿ ರಕ್ತದ ಮಡುವಿನಲ್ಲಿ ಶವವಾಗಿ ಪತ್ತೆಯಾಗಿದ್ದರು.

ಇಷ್ಟು ಭೀಕರವಾಗಿ ಕೊಲೆ ಮಾಡಿಸುವ ತಪ್ಪು ನಿಮ್ಮ ಮಾವ ಮಾಡಿದ್ದೇನು ಎಂಬ ಪೊಲೀಸರ ಪ್ರಶ್ನೆಗೆ ಕೊಲೆಗಡುಕಿ ಸೊಸೆ ಕೊಟ್ಟಿರುವ ಉತ್ತರ ಅಪಾರ್ಟೆಮೆಂಟ್ನಲ್ಲಿ ವಾಸವಿರುವ ಸೊಸೆಯ ಮನೆಗೆ ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಿಸಿರುವ ಮಾವ, ಅದರ ಮೂಲಕ ನನ್ನ ಚಲನವಲನಗಳನ್ನು ಗಮನಿಸುವುದು, ಎಲ್ಲಿಗೂ ಹೋಗದಂತೆ ಕಣ್ಣಿಡುವುದು, ತಡರಾತ್ರಿ ಪಾರ್ಟಿಗಳಿಗೆ ಹೋಗಲು ಆಕ್ಷೇಪಿಸುವುದು ಹಾಗೂ ಸಣ್ಣಪುಟ್ಟ ಖರ್ಚುಗಳಿಗೂ ಕೈಚಾಚಿ ಹಣ ಕೇಳುವಂತ ಪರಿಸ್ಥಿತಿಗೆ ನೂಕುತ್ತಿದ್ದದ್ದನ್ನು ಸಹಿಸಿಕೊಳ್ಳಲು ಸಾಧ್ಯವಾಗದೆ ಕೊಲೆಗೈದೆ ಎಂದು ಹೇಳಿಕೊಂಡಿದ್ದಾಳೆ.

ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸೊಸೆ ಶಾಲು (36) ಸೇರಿದಂತೆ ಇಬ್ಬರು ಸುಪಾರಿ ಹಂತಕರನ್ನು ಪೊಲೀಸರು ಸದ್ಯ ಬಂಧಿಸಿ, ತನಿಖೆಗೆ ಒಳಪಡಿಸಿದ್ದಾರೆ.

ಪೊಲೀಸರ ಮಾಹಿತಿಯ ಪ್ರಕಾರ, ಮಿನೋಚಾ ಕುಟುಂಬವು ಅತ್ಯಂತ ಶ್ರೀಮಂತ ಕುಟುಂಬವಾಗಿದ್ದೂ, ಹಣಕ್ಕೆ ಯಾವುದೇ ಕುಂದು ಕೊರತೆ ಇರಲಿಲ್ಲ. ಒಂದು ರೀತಿಯಲ್ಲಿ ಲಕ್ಸುರಿ ಜೀವನಕ್ಕೆ ಯಾವುದೇ ಮಿತಿ ಇರಲಿಲ್ಲ. ಆದರೆ, ಮನೆಯಲ್ಲಿ ಪ್ರತಿಯೊಂದು ಖರ್ಚಿಗೂ ಮಾವ ವಿನೀತ್ ಮಿನೋಚಾ ಅವರನ್ನೇ ಕೇಳಬೇಕಾಗಿತ್ತು. ಅಷ್ಟೇ ಅಲ್ಲದೆ, ಮನೆತುಂಬಾ ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಿಸಿ, ಪ್ರತಿಯೊಂದು ಚಲನವಲನದ ಮೇಲೆಯೂ ನಿಗಾ ಇಡಲಾಗುತ್ತಿತ್ತು ಎಂದು ವಿವರಿಸಲಾಗಿದೆ.

ಸೆಪ್ಟೆಂಬರ್ 5ರ ರಾತ್ರಿ ಶಾಲು, ತನ್ನ ಪತಿ ಸುಬ್ರತ್ ಮತ್ತು ಮಗನೊಂದಿಗೆ ಪಾರ್ಟಿಗೆ ಹೋಗಿದ್ದಳು. ಪ್ಲ್ಯಾನ್ ಪ್ರಕಾರ, ತಾವು ಪಾರ್ಟಿಗೆ ಹೋದ ಬೆನ್ನಲ್ಲೇ ನಕಲಿ ಕೀ ಮೂಲಕ ಮನೆಯೊಳಗೆ ನುಗ್ಗಿ ಮಾವನನ್ನು ಕೊಲ್ಲುವಂತೆ ಹೇಳಿ ಹೋಗಿದ್ದಳು. ಪ್ಲ್ಯಾನ್ ಪ್ರಕಾರ, ಹಂತಕರು ಶಾಲು ಮಾವನನ್ನು ಮೊದಲು ದಿಂಬಿನಿಂದ ಉಸಿರುಗಟ್ಟಿಸಿ ಕೊಂದು, ಅದು ಹೃದಯಾಘಾತದಿಂದ ಸಂಭವಿಸಿದ ಸಾವು ಎಂದು ನಂಬಿಸಲು ಸಹಾಯ ಮಾಡುವಂತೆ ರೂಪಿಸಲಾಗಿತ್ತು. ಆದರೆ, ಮಿನೋಚಾ ಅವರು ಆಕಸ್ಮಿಕವಾಗಿ ಹಂತಕರು ಅಡಗಿದ್ದ ಕೊಠಡಿಯತ್ತ ಬಂದ ಕೂಡಲೇ ಹೆದರಿದ ಹಂತಕರು, ಚಾಕುವಿನಿಂದ ಬರೋಬ್ಬರಿ 26 ಬಾರಿ ಇರಿದು ಭೀಕರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ.

ವಿಚಾರಣೆ ವೇಳೆ, ಮಾವನನ್ನು ಕೊಲ್ಲಲು ಸೊಸೆ ಶಾಲು ಅವರೇ ನಮಗೆ ಸುಪಾರಿ ಕೊಟ್ಟಿದ್ದಾಗಿ ಹಂತಕರು ಬಾಯಿಬಿಟ್ಟಿದ್ದಾರೆ. ಪ್ರಸ್ತುತ, ಆರೋಪಿ ಶಾಲು ಜೈಲುಪಾಲಾಗಿದ್ದು, ಈ ಕೊಲೆಯಲ್ಲಿ ಆಕೆಯ ಪತಿಯ ಪಾತ್ರ ಏನಾದರೂ ಇದೆಯಾ ಎಂಬುದನ್ನು ಪೊಲೀಸರು ತೀವ್ರವಾಗಿ ತನಿಖೆ ನಡೆಸುತ್ತಿದ್ದಾರೆ.

Related Articles

Back to top button
error: Content is protected !!