ಇತರೆ

ಕಟ್ಟಿಕೊಂಡ ಗಂಡ, ಮಗುವನ್ನು ಬಿಟ್ಟು ನಗ-ನಾಣ್ಯ, ಚಿನ್ನಾಭರಣಗಳನ್ನು ದೋಚಿಕೊಂಡು ಪ್ರಿಯಕರನೊಂದಿಗೆ ಪರಾರಿ!

Views: 80

ಕನ್ನಡ ಕರಾವಳಿ ಸುದ್ದಿ: ಕಟ್ಟಿಕೊಂಡ ಗಂಡ, ಹಡೆದ ಕರುಳನ್ನು ಧಿಕ್ಕರಿಸಿ ಪ್ರಿಯಕರನ ವ್ಯಾಮೋಹಕ್ಕೆ ಬಿದ್ದು ಮನೆ ತೊರೆದ ವಿವಾಹಿತ ಮಹಿಳೆಯೊಬ್ಬಳ ಬದುಕು ಬೀದಿಗೆ ಬಿದ್ದಿದೆ. ನಂಬಿ ಹೋದವನು ಕೈಕೊಟ್ಟರೆ, ಇತ್ತ ಮಾಡಿದ ತಪ್ಪಿಗೆ ಪತಿಯೂ ಕ್ಷಮಿಸದೆ ಹೊರದಬ್ಬಿದ ಪರಿಣಾಮ ಆಕೆ ನಡುರಸ್ತೆಯಲ್ಲಿ ನಿಂತು ಗೋಳಾಡುವಂತಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಸಲೋನಿ ಎಂಬ ಮಹಿಳೆಗೆ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದು, ದಂಪತಿಗೆ ಎರಡು ವರ್ಷದ ಕಂದಮ್ಮನಿದ್ದಾನೆ. ಸಂಸಾರ ಸುಸೂತ್ರವಾಗಿ ಸಾಗುತ್ತಿದ್ದರೂ, ಸಲೋನಿ ತನ್ನ ಹಳೆಯ ಪ್ರಿಯಕರನ ಜೊತೆ ರಹಸ್ಯ ಸಂಪರ್ಕ ಮುಂದುವರಿಸಿದ್ದಳು. ತವರು ಮನೆಗೆ ಹೋದಾಗಲೆಲ್ಲಾ ಪ್ರಿಯಕರನನ್ನು ಭೇಟಿಯಾಗುತ್ತಿದ್ದಳು.

ಇತ್ತೀಚೆಗೆ ಪತಿ ಕೆಲಸಕ್ಕೆ ಹೋದ ಸಮಯ ನೋಡಿ, “ಔಷಧಿ ತರುತ್ತೇನೆ” ಎಂದು ಅತ್ತೆ-ಮಾವನಿಗೆ ನಂಬಿಸಿ ಮನೆಯಿಂದ ಹೊರಬಿದ್ದಿದ್ದಾಳೆ. ಕೇವಲ ಕೈಬೀಸಿ ಹೋಗದೆ ಮನೆಯಲ್ಲಿದ್ದ ನಗ-ನಾಣ್ಯ, ಚಿನ್ನಾಭರಣಗಳನ್ನು ದೋಚಿಕೊಂಡು, ಮುಗ್ಧ ಮಗುವನ್ನೂ ಲೆಕ್ಕಿಸದೆ ಪ್ರಿಯಕರನ ಬಳಿಗೆ ಓಡಿಹೋಗಿದ್ದಳು.

ಆದರೆ ಅಲ್ಲಿಗೆ ಹೋದ ಮೇಲೆಯೇ ಆಕೆಗೆ ಆಘಾತ ಕಾದಿತ್ತು. ಪ್ರಿಯಕರ ಆಕೆಯನ್ನು ಶಾಶ್ವತವಾಗಿ ಜೊತೆಯಲ್ಲಿಟ್ಟುಕೊಳ್ಳಲು ಸ್ಪಷ್ಟವಾಗಿ ನಿರಾಕರಿಸಿದನು. ಆಕೆಯನ್ನು ಕೇವಲ ಬಳಸಿಕೊಂಡಿದ್ದ ಆತ, ಯಾವುದೇ ಜವಾಬ್ದಾರಿ ಹೊರಲು ಸಾಧ್ಯವಿಲ್ಲವೆಂದು ಆಕೆಯನ್ನು ಅಲ್ಲಿಂದ ಓಡಿಸಿದ್ದಾನೆ. ಮೋಸ ಹೋದೆ ಎಂದು ಅರಿತ ಆಕೆ ಅನಿವಾರ್ಯವಾಗಿ ಪತಿಯ ಮನೆಗೆ ವಾಪಸ್ ಬಂದಿದ್ದಾಳೆ.

ಆದರೆ ಆಕೆಯ ದ್ರೋಹ ಮತ್ತು ಕಳ್ಳತನದಿಂದ ರೊಚ್ಚಿಗೆದ್ದಿದ್ದ ಪತಿ, ಆಕೆಯನ್ನು ಮನೆಯೊಳಗೆ ಸೇರಿಸಲು ಕಡ್ಡಿ ಮುರಿದಂತೆ ನಿರಾಕರಿಸಿದ್ದಾನೆ. “ಎರಡು ವರ್ಷದ ಹಸುಗೂಸನ್ನು ಬಿಟ್ಟು, ಒಡವೆ ಕದ್ದು ಹೋದ ನಿನ್ನನ್ನು ಕ್ಷಮಿಸುವ ಮಾತೇ ಇಲ್ಲ. ಬೇಕಿದ್ದರೆ ಎಲ್ಲಿಗಾದರೂ ಹೋಗಿ ದೂರು ಕೊಡು” ಎಂದು ಮುಖಕ್ಕೆ ಹೊಡೆದಂತೆ ಹೇಳಿದ್ದಾನೆ. ಸ್ಥಳೀಯರು ಎಷ್ಟೇ ಸಮಾಧಾನ ಮಾಡಲು ಯತ್ನಿಸಿದರೂ ಆತ ಒಪ್ಪಲಿಲ್ಲ.

ಇತ್ತ ಮಾಡಿದ ಅವಮಾನಕ್ಕೆ ತವರು ಮನೆಯವರೂ ಆಕೆಯನ್ನು ಸೇರಿಸಿಕೊಳ್ಳಲು ನಿರಾಕರಿಸಿದ್ದು, ಕಾಲಿಟ್ಟರೆ ಸುಮ್ಮನೆ ಬಿಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಕ್ಷಣಿಕ ಸುಖಕ್ಕೆ ಆಸೆಪಟ್ಟು ಇಡೀ ಬದುಕನ್ನೇ ಬೀದಿಗೆ ತಂದುಕೊಂಡ ಆ ಮಹಿಳೆ, ಈಗ ಯಾರ ಆಸರೆಯೂ ಇಲ್ಲದೆ ನಡುರಸ್ತೆಯಲ್ಲಿ ಕಣ್ಣೀರು ಹಾಕುತ್ತಿದ್ದಾಳೆ. ಇದನ್ನು ಕಂಡ ಸ್ಥಳೀಯರು “ಮಾಡಿದ ಪಾಪ ತಕ್ಷಣವೇ ಸುತ್ತಿಕೊಂಡಿದೆ” ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

Related Articles

Back to top button
error: Content is protected !!