ಇತರೆ

ಮನೆಯ ವಠಾರದಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿದ ಅಪರಿಚಿತ ಮಹಿಳೆಯ ಶವ ಪತ್ತೆ!

Views: 68

ಕನ್ನಡ ಕರಾವಳಿ ಸುದ್ದಿ: ಮನೆಯ ವಠಾರದಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿದ ಅಪರಿಚಿತ ಮಹಿಳೆಯ ಶವ ಪತ್ತೆಯಾದದ ಆಘಾತಕಾರಿ ಘಟನೆ ರಾಜಸ್ಥಾನದ ಜೈಪುರ ಶಾಸ್ತ್ರಿ ನಗರ ಪ್ರದೇಶದ ಮನೆಯ ವರಾಂಡಾದಲ್ಲಿ ಬೆಳಕಿಗೆ ಬಂದಿದೆ.

ಮೃತದೇಹದ ಮುಖದ ಮೇಲೆ ಗಾಯದ ಗುರುತುಗಳು ಕಂಡು ಬಂದಿದ್ದು, ಕೊಲೆಯಿರಬಹುದು ಎಂದು ಶಂಕಿಸಲಾಗಿದೆ ಪರಶುರಾಮ್ ಪಾರ್ಕ್ ಬಳಿಯ ಸುಭಾಷ್ ಕಾಲೋನಿಯಲ್ಲಿ ಮೂರು ಅಂತಸ್ತಿನ ಕಟ್ಟಡದಲ್ಲಿ ಶವ ಪತ್ತೆಯಾಗಿದೆ. ಮನೆಯ ಮಾಲೀಕರು ಆರಂಭದಲ್ಲಿ ಚೀಲವನ್ನು ಗಮನಿಸಿದರು. ಅದರಲ್ಲಿ ಬಾಡಿಗೆದಾರರ ವಸ್ತುಗಳು ಇರಬಹುದೆಂದು ಭಾವಿಸಿದರು. ಚೀಲ ತೆರೆದಾಗ ಕೆಟ್ಟ ವಾಸನೆ ಬರುತ್ತಿತ್ತು. ಒಳಗೆ ಪರಿಶೀಲಿಸಿದಾಗ ಅದರೊಳಗೆ ಮಹಿಳೆಯ ಶವ ಪತ್ತೆಯಾಗಿತ್ತು. ಆಕೆಯ ಮುಖದ ಮೇಲೆ ಗಾಯದ ಗುರುತುಗಳಿದ್ದವು ಎಂದು ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ಉತ್ತರ) ಬಜರಂಗ್ ಸಿಂಗ್ ಹೇಳಿದ್ದಾರೆ.

ವಿಚ್ಛೇದಿತ ಪತ್ನಿಗೆ ಮಕ್ಕಳನ್ನು ಒಪ್ಪಿಸಲು ಇಚ್ಛಿಸದ ಪತಿ ಮಕ್ಕಳನ್ನು ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡ

ಮನೆಯು ಗುತ್ತಿಗೆದಾರ ದಿವಂಗತ ಸೂರಜ್ ಪ್ರಕಾಶ್ ಸನ್ವಾರಿಯಾ ಎಂಬುವವರಿಗೆ ಸೇರಿತ್ತು. ಅವರ ವಿಧವೆ ಪತ್ನಿ ಮುನ್ನಿ ದೇವಿ ನೆಲ ಮಹಡಿಯಲ್ಲಿ ವಾಸಿಸುತ್ತಿದ್ದರೆ, ಮೇಲಿನ ಮಹಡಿಯಲ್ಲಿ ಇಬ್ಬರು ಬಾಡಿಗೆದಾರರು ವಾಸಿಸುತ್ತಿದ್ದಾರೆ.

ದೇಹವನ್ನು ಕಂಬಳಿಯಲ್ಲಿ ಸುತ್ತಿ ಎರಡು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಲಾಗಿತ್ತು. ಹೀಗಾಗಿ, ಇದು ಕೊಳೆತ ವಾಸನೆ ಅಷ್ಟಾಗಿ ಬರದೆ ಇರಲು ಕಾರಣವಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ವಿಧಿವಿಜ್ಞಾನ ತಂಡಗಳು ಸ್ಥಳದಿಂದ ಪುರಾವೆಗಳನ್ನು ಸಂಗ್ರಹಿಸಿವೆ. ಶ್ವಾನದಳದ ಮಾಹಿತಿಯ ಆಧಾರದ ಮೇಲೆ, ಪೊಲೀಸರು ಸ್ಥಳೀಯ ಯುವಕನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಶವವನ್ನು ಕೆಲವು ಮೀಟರ್‌ಗಳಷ್ಟು ಎಳೆದುಕೊಂಡು ಹೋಗಲಾಗಿದೆ ಎಂದು ಅವರು ಹೇಳಿದರು. ದುಷ್ಕರ್ಮಿಯು ಪಕ್ಕದ ಮನೆಯ ಮುಖ್ಯದ್ವಾರವನ್ನು ತೆರೆದು ಚೀಲವನ್ನು ವರಾಂಡಾದಲ್ಲಿ ಬಿಟ್ಟು ಹೋಗಿರುವಂತೆ ತೋರುತ್ತಿದೆ ಎಂದು ಅವರು ಹೇಳಿದರು.

Related Articles

Back to top button
error: Content is protected !!