ಇತರೆ

ಮನೆಯ ಮಾಳಿಗೆಯ ಮೇಲೆ ಗಾಳಿಪಟ ಹಾರಿಸುತ್ತಿದ್ದ ವೇಳೆ ಬಾಲಕ ಬಿದ್ದು ಸಾವು 

Views: 117

ಕನ್ನಡ ಕರಾವಳಿ ಸುದ್ದಿ: ಮನೆಯ ಮಾಳಿಗೆಯ ಮೇಲೆ ನಿಂತುಕೊಂಡು ಗಾಳಿಪಟ ಹಾರಿಸುತ್ತಿದ್ದ ಬಾಲಕನೋರ್ವ ಆಯತಪ್ಪಿ ಕೆಳಕ್ಕೆ ಬಿದ್ದು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.

ಈ ಘಟನೆಯು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ನವನಿಹಾಳ ಖೀರುನಾಯಕ ತಾಂಡಾದಲ್ಲಿ ನಡೆದಿದೆ. ಮೃತ ಬಾಲಕ ಆದಿತ್ಯ ಗಜಾನಂದ ಜಾಧವ (15) ಕಮಲಾಪುರ ಪಟ್ಟಣದ ಶಾರದಾದೇವಿ ಸ್ವಾಮಿ ವಿವೇಕಾನಂದ ಪ್ರೌಢ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಶಾಲೆ ಮುಗಿಸಿ ಮನೆಗೆ ಬಂದು ಮನೆಯ ಮಾಳಿಗೆಯ ಮೇಲೆ ಹತ್ತಿ ಗಾಳಿಪಟ ಹಾರಿಸುತ್ತಿದ್ದ

ಈ ವೇಳೆ ಆಯತಪ್ಪಿ ಮೆಟ್ಟಿಲ ಮೇಲಿಂದ ರಭಸವಾಗಿ ನೆಲಕ್ಕೆ ಬಿದ್ದಿದ್ದು, ಗಂಭೀರ ಗಾಯಗೊಂಡಿದ್ದ. ಕೂಡಲೇ ಬಾಲಕನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಮೃತಪಟ್ಟಿದ್ದಾನೆ.

Related Articles

Back to top button
error: Content is protected !!