ಇತರೆ
ಮನೆಯಲ್ಲಿ ಒಬ್ಬಳೇ ಇರುವಾಗ ಲೈಂಗಿಕ ದೌರ್ಜನ್ಯ: ಮಾವನ ವಿರುದ್ಧ ಸೊಸೆ ದೂರು
Views: 65
ಕನ್ನಡ ಕರಾವಳಿ ಸುದ್ದಿ: ಥಣಿಸಂದ್ರದ ಪ್ರತಿಷ್ಠಿತ ಶಾಲೆಯೊಂದರ ಪ್ರಾಂಶುಪಾಲರಾಗಿರುವ ಮಹಿಳೆಗೆ, ಆಕೆಯ ಮಾವನೇ ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ ದೂರು ದಾಖಲಾಗಿದೆ.
ಬೆಂಗಳೂರಿನ ಆರ್.ಟಿ. ನಗರದಲ್ಲಿ ಮಾನವೀಯ ಸಂಬಂಧಗಳೇ ತಲೆತಗ್ಗಿಸುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. 2007ರಲ್ಲಿ ವಿವಾಹವಾಗಿದ್ದ ಸಂತ್ರಸ್ತೆಗೆ ಆರಂಭದಲ್ಲಿ ಸಂಸಾರ ಸುಗಮವಾಗಿಯೇ ಇತ್ತು. ಆದರೆ, 2020ರಿಂದ ಮಾವನ ವಿಕೃತ ಚೇಷ್ಟೆಗಳು ಮಿತಿಮೀರಿವೆ. ಪಕ್ಕದ ಅಪಾರ್ಟ್‌ಮೆಂಟ್‌ನಲ್ಲೇ ವಾಸವಿದ್ದ ಆರೋಪಿ, ಸೊಸೆ ಮನೆಯಲ್ಲಿ ಒಬ್ಬಳೇ ಇರುವುದನ್ನು ಹೊಂಚು ಹಾಕಿ ಬಂದು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎನ್ನಲಾಗಿದೆ.
ವಿಷಯವನ್ನು ಪತಿಗೆ ತಿಳಿಸಿದರೆ ನಿನ್ನನ್ನು ಮತ್ತು ಮಕ್ಕಳನ್ನು ಕೊಲ್ಲುವುದಾಗಿ ಆರೋಪಿ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದ. ಮನೆಯಷ್ಟೇ ಅಲ್ಲದೆ, ಅಪಾರ್ಟ್‌ಮೆಂಟ್ ಲಿಫ್ಟ್ ಮತ್ತು ಶಾಲೆಯ ಕ್ಯಾಬಿನ್‌ನಲ್ಲೂ ಅಸಭ್ಯವಾಗಿ ವರ್ತಿಸಿ ಹಲ್ಲೆ ನಡೆಸಿದ್ದ ಎಂದು ಆರೋಪಿಸಲಾಗಿದೆ.






