ಶಿಕ್ಷಣ

ಮದರ್ ತೆರೇಸಾ ಮೆಮೋರಿಯಲ್ ಶಾಲೆ ಶಂಕರನಾರಾಯಣದಲ್ಲಿ ‘ಕರಾವಳಿ ಪರಂಪರೆ ಬೆಳೆಸುವ ಪಥದಲ್ಲಿ ಆಟಿ ಆಹಾರ ಮೇಳ’

"ಉತ್ತಮ ಆಹಾರವೇ ಆರೋಗ್ಯಕ್ಕೆ ಸಹಕಾರಿ"

Views: 250

ಕನ್ನಡ ಕರಾವಳಿ ಸುದ್ದಿ: ಆಧುನಿಕತೆಯ ಭರದಲ್ಲಿ ಲೇಸ್, ಕುರ್ಕುರೆ ,ಪಿಜ್ಜಾ, ಬರ್ಗರ್ ನಂತಹ ಅಪಾಯಕಾರಿ, ಅನಾರೋಗ್ಯಕರ ಖಾದ್ಯಗಳತ್ತ ಆಕರ್ಷಿತರಾಗಿರುವ ಮಕ್ಕಳಲ್ಲಿ ಸಾಂಪ್ರದಾಯಿಕವಾದ ಮತ್ತು ಆರೋಗ್ಯಕರವಾದ ಆಹಾರಗಳ ಪರಿಚಯ ಹಾಗೂ ಅದರ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಮದರ್ ತೆರೆಸಾ ಮೆಮೋರಿಯಲ್ ಶಾಲೆ ಶಂಕರನಾರಾಯಣದಲ್ಲಿ ಎಲ್ ಕೆಜಿ ಯಿಂದ 2ನೇ ತರಗತಿಯ ಪುಟಾಣಿಗಳಿಗೆ ಸಾಂಪ್ರದಾಯಿಕ ಆಟಿ ಆರೋಗ್ಯಕರ ಖಾದ್ಯಗಳ ಔತಣ ಕೂಟವನ್ನು ಏರ್ಪಡಿಸಲಾಯಿತು. ಈ ಸಂಭ್ರಮದಲ್ಲಿ ವಿದ್ಯಾರ್ಥಿಗಳು ತಾವು ತಮ್ಮ ಪೋಷಕರೊಂದಿಗೆ ಜೊತೆಗೂಡಿ ತಯಾರಿಸಿದ ಪತ್ರೊಡೆ, ಸುಕ್ಕಿನುಂಡೆ ಅರಿಶಿನ ಎಲೆ ಕಡುಬು, ಅಕ್ಕಿ ಉಂಡೆ, ಮೊದಲಾದ ವಿಶೇಷ ಹಾಗೂ ಆರೋಗ್ಯಕರ ತಿನಿಸುಗಳನ್ನು ತಂದು ತಮ್ಮ ಸ್ನೇಹಿತರು ಹಾಗೂ ಗುರುಗಳೊಂದಿಗೆ ಹಂಚಿಕೊಂಡು ಸಂಭ್ರಮಿಸಿದರು. ಜೊತೆಗೆ ಇತ್ತೀಚಿನ ದಿನಗಳಲ್ಲಿ ಕಣ್ಮರೆಯಾಗುತ್ತಿರುವ ಹಲವಾರು ಸಾಂಪ್ರದಾಯಿಕ ಹಾಗೂ ಸ್ಥಳೀಯ ಅಡುಗೆಗಳನ್ನು ಮತ್ತೆ ಸವಿಯುವ ಅವಕಾಶವನ್ನು ಮಾಡಿಕೊಟ್ಟರು. ಈ ರೀತಿಯ ಕಾರ್ಯಕ್ರಮಗಳು ಮಕ್ಕಳಲ್ಲಿ ಸಾಂಸ್ಕೃತಿಕ ಅರಿವು ಹಾಗೂ ಆರೋಗ್ಯಕರ ಬೆಳವಣಿಗೆಗೆ ಸಹಕಾರಿಯಾಗುತ್ತದೆ . ಈ ಸಂಭ್ರಮಾಚರಣೆಯಲ್ಲಿ ಶಾಲಾ ಆಡಳಿತ ಮಂಡಳಿಯವರು, ಮುಖ್ಯೋಪಾಧ್ಯಾಯರು ಹಾಗೂ ಎಲ್ಲಾ ಶಿಕ್ಷಕ, ಉಪನ್ಯಾಸಕ ವೃಂದದವರು ಮಕ್ಕಳೊಂದಿಗೆ ಜೊತೆಯಾಗಿರುವುದು ಮಕ್ಕಳ ಸಂತೋಷವನ್ನು ಮತ್ತಷ್ಟು ಇಮ್ಮಡಿ ಗೊಳಿಸಿತು. ಕಾರ್ಯಕ್ರಮವು ಎಲ್ಲ ಪೋಷಕರ ಸಹಕಾರದೊಂದಿಗೆ ವಿಶೇಷವಾಗಿ ಸಂಪನ್ನಗೊಂಡಿತು.

Related Articles

Back to top button