ಜನಮನ

ಮತದಾನದ ಜಾಗೃತಿ :ವೋಟ್ ಮಾಡಿ, ಊಟ ಮಾಡಿ, ಉಚಿತ ಉಪಹಾರ ಸೇವೆ

Views: 56

ಬೆಂಗಳೂರು: ಮತದಾನದ ಬಗ್ಗೆ ಹಲವು ರೀತಿಯಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಡೆಯುತ್ತಿವೆ. ಕೆಲವರು ತಮ್ಮ ಮದುವೆ ಕಾರ್ಯಕ್ರಮಗಳಲ್ಲೂ ಮತಹಕ್ಕಿನ ಬಗ್ಗೆ ಅರಿವು ಮೂಡಿಸಿರುವುದು ಕಂಡುಬರುತ್ತಿದೆ. ಆದರೆ, ಬೆಂಗಳೂರಿನ ಹೋಟೆಲ್ವೊಂದು ಮತದಾನ ಮಾಡಿ ಬಂದವರಿಗೆ ಉಚಿತ ಉಪಹಾರ ಸೇವೆ ನೀಡಲು ಮುಂದಾಗಿದೆ.

ಮತದಾನದ ಜಾಗೃತಿ ಸಲುವಾಗಿ ನಗರದ ನಿಸರ್ಗ ಹೊಟೇಲ್ ಮಾಲೀಕರು ಮತದಾನ ಮಾಡಿ ಬಂದವರಿಗೆ ಉಚಿತ ತಿಂಡಿ ತಿನಿಸುಗಳ ಸೇವೆಯನ್ನು ನೀಡಲು ನಿರ್ಧರಿಸಿದ್ದಾರೆ. ರಾಜ್ಯದಲ್ಲಿ ಮೊದಲ ಹಂತದಲ್ಲಿ ಬೆಂಗಳೂರು ಸೇರಿ 14 ಕ್ಷೇತ್ರಗಳಲ್ಲಿ ಏಪ್ರಿಲ್ 26 ರಂದು ಮತದಾನ ನಡೆಯಲಿದೆ. ಈ ದಿನ ಮತದಾನದ ಮಾಡಿದ ಬಳಿಕ ಹೋಟೆಲ್ಗೆ ಬಂದು ಮತದಾನದ ಗುರುತು ತೋರಿಸಿದರೆ ಜನರಿಗೆ ಉಚಿತ ಬೆಣ್ಣೆ ದೋಸೆ, ಸಿಹಿ ತಿನಿಸು, ತಂಪು ಪಾನಕ ನೀಡಲಿದ್ದಾರೆ

ಚುನಾವಣಾ ಆಯೋಗದ ಅನುಮತಿ ಮೇರೆಗೆ ರಿಯಾಯಿತಿ ದರದಲ್ಲಿ ಊಟ, ತಿಂಡಿ, ಉಚಿತ ಸೇವೆಗೆ ಅವಕಾಶ ನೀಡಲಾಗಿದೆ. ಇದನ್ನು ಬಳಸಿಕೊಂಡು ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಹೋಟೆಲ್ ಮತದಾರರಿಗೆ ಈ ಮೂಲಕ ಮತದಾನದ ಜಾಗೃತಿಯನ್ನು ಮೂಡಿಸಲು ಮುಂದಾಗಿದ್ದಾರೆ.

ವೋಟ್ ಮಾಡಿ ಊಟ ಮಾಡಿ:’ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿ ಗುರುತು ತೋರಿಸಿದವರಿಗೆ ಬೆಣ್ಣೆ ಖಾಲಿ ದೋಸೆ, ತುಪ್ಪದ ಲಾಡು ಮತ್ತು ತಂಪು ಪಾನಕವನ್ನು ಮತದಾನದ ಉತ್ತೇಜನಕ್ಕಾಗಿ ಉಚಿತವಾಗಿ ನೀಡಲಾಗುವುದು. “ವೋಟ್ ಮಾಡಿ, ಊಟ ಮಾಡಿ” ಎನ್ನುವ ಸಾಮಾಜಿಕ ಕಳಕಳಿವುಳ್ಳ ರಾಜಕೀಯೇತರ ಕಾರ್ಯಕ್ರಮ ಇದಾಗಿದೆ’ ಎಂದು ನಿಸರ್ಗ ಹೊಟೇಲ್ ಮಾಲೀಕರಾದ ಕೃಷ್ಣ ರಾಜ್ ಹೇಳಿದ್ದಾರೆ

 

Related Articles

Back to top button
error: Content is protected !!