ಜನಮನ

ಮಡಿಕೇರಿ: ಇಬ್ಬರು ಮಹಿಳೆಯರು ನಾಪತ್ತೆ

Views: 0

ಮಡಿಕೇರಿ ನ.11 : ಗೋಣಿಕೊಪ್ಪ ವೆಂಕಟಪ್ಪ ಬಡಾವಣೆ ನಿವಾಸಿ ಸಿ.ಶೇಖರ್ ಅವರ ಪತ್ನಿ ಚೆಗನಿದೇವಿ (28) ನ.6 ರಿಂದ ನಾಪತ್ತೆಯಾಗಿದ್ದಾರೆ ಎಂದು ಪತಿ ಶೇಖರ್ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ತಿತಿಮತಿ ರೇಷ್ಮೆಹಡ್ಲು ನಿವಾಸಿ ಜೇನುಕುರುಬರ ಸುರೇಶ ಎಂಬವರ ಪತ್ನಿ ಪುನಿತಾ (24) ನ.5 ರಿಂದ ನಾಪತ್ತೆಯಾಗಿದ್ದಾರೆ ಎಂದು ಪತಿ ಸುರೇಶ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಾಣೆಯಾದ ಮಹಿಳೆಯರು ಪತ್ತೆಯಾದಲ್ಲಿ 08274247333 ಸಂಖ್ಯೆ ಸಂಪರ್ಕಿಸಬಹುದಾಗಿದೆ ಎಂದು ಗೋಣಿಕೊಪ್ಪ ಪೊಲೀಸ್ ಠಾಣೆ ಪ್ರಕಟನೆ ತಿಳಿಸಿದೆ.

Related Articles

Back to top button
error: Content is protected !!