ಮಗಳ ಮುಂದೆಯೇ ತಾಯಿ ಹತ್ಯೆ ಪ್ರಕರಣ: ಬಿಗ್ ಟ್ವಿಸ್ಟ್.. ಹೆಣ್ಣು ಕೊಟ್ಟ ಅತ್ತೆಯನ್ನು ಕೊಂದ ಅಳಿಯ!

Views: 0
ಮಂಡ್ಯ: ಇಲ್ಲಿನ ಪಾಂಡವಪುರ ತಾಲೂಕಿನ ಎಲೆಕೆರೆಯಲ್ಲಿ ಮಗಳ ಮುಂದೆಯೇ ತಾಯಿ ಹತ್ಯೆ ನಡೆದಿತ್ತು. ಆದರೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹೆಣ್ಣು ಕೊಟ್ಟ ಅತ್ತೆಯನ್ನ ಅಳಿಯನೇ ಕೊಂದಿರುವುದಾಗಿ ತಿಳಿದುಬಂದಿದೆ.

ಅಳಿಯ ಕಾಂತರಾಜು ಹೆಣ್ಣು ಕೊಟ್ಟ ಅತ್ತೆ ಪಾರ್ವತಮ್ಮ(50)ನನ್ನು ಕೊಲೆ ಮಾಡಿದ್ದಾನೆ. ನಡುರಾತ್ರಿ ಮುಸುಕುದಾರಿಯಾಗಿ ಬಂದು ಕೊಂದಿದ್ದಾನೆ. ಹೆಂಡತಿ ದೂರವಾಗಲು ಅತ್ತೆಯೇ ಕಾರಣ ಎಂದು ಹತ್ಯೆ ಮಾಡಿದ್ದಾನೆ.
ಅತ್ತೆ ಪಾರ್ವತಮ್ಮ ಮತ್ತು ಮಗಳು ಅರ್ಪಿತ ಹಬ್ಬದ ಹಿನ್ನಲೆ ಮನೆ ದೇವರ ಪೂಜೆಗೆ ತೆರಳಿದ್ದರು. ಪೂಜೆ ಮುಗಿಸಿ ಮಧ್ಯ ರಾತ್ರಿ 12.30ಕ್ಕೆ ವಾಪಸ್ಸು ಆಗುವಾಗ ಅಳಿಯ ಫಾಲೋ ಮಾಡಿಕೊಂಡು ಬಂದಿದ್ದಾನೆ.
ಯಾರಿಗೂ ಗುರುತು ತಿಳಿಯದಂತೆ ಮುಸುಕುದಾರಿಯಾಗಿ, ಜರ್ಕಿನ್ ಧರಿಸಿ ಬಂದಿದ್ದಾನೆ. ಹತ್ತಿರ ಬಂದು ಕ್ಷಣಾರ್ಧದಲ್ಲೇ ಅತ್ತೆಯ ಕತ್ತುಕೊಯ್ದು ಎಸ್ಕೇಪ್ ಆಗಿದ್ದಾನೆ. ಅತ್ತ ತಾಯಿ ಪಾರ್ವತಮ್ಮ ಮಗಳು ಅರ್ಪಿತಾ ಮುಂದೆಯೇ ಕೊಲೆಯಾಗಿದ್ದಾಳೆ.
ಕಾಂತರಾಜು ಸ್ವಂತ ಹೆಂಡತಿಗೆ ತಿಳಿಯದಂತೆ ವೇಷ ಧರಿಸಿ ಬಂದಿದ್ದನು. ಅತ್ತೆಯನ್ನ ಕೊಂದು ತನಗೆ ಏನು ಗೊತ್ತಿಲ್ಲದ್ದಂತೆ ತಮ್ಮೂರಿನ ಮನೆಯಲ್ಲಿ ಇದ್ದನು. ಅನುಮಾನದ ಮೇಲೆ ವಿಚಾರಣೆ ನಡೆಸಿದಾಗ ಸತ್ಯ ಹೊರಬಿದಿದ್ದೆ. ಪೊಲೀಸರು ಕಾಂತರಾಜುನನ್ನು ಬಂದಿಸಿದ್ದಾರೆ.






