ಜನಮನ

‘ಮಕ್ಕಳ ಕಿಡ್ನ್ಯಾಪ್’ ಬಿಹಾರಿ ಖತರ್ನಾಕ್​ ಕಳ್ಳರ ಗ್ಯಾಂಗ್ ಕಾಲಿಟ್ಟಿದೆ ಹುಷಾರ್ !

Views: 6

 

ಸಿಲಿಕಾನ್ ಸಿಟಿಯಲ್ಲಿ ಭ್ರೂಣ ಪತ್ತೆ ಗ್ಯಾಂಗ್ ಪತ್ತೆಯಾಗಿತ್ತು. ಇದಾದ ನಂತರ ಪುಟ್ಟ ಮಕ್ಕಳನ್ನು ಮಾರಾಟ ಮಾಡೋ ಜಾಲ ಬಲೆಗೆ ಬಿದ್ದಿತ್ತು. ಇದೀಗ ಮಕ್ಕಳನ್ನು ಕದಿಯೋ ಗ್ಯಾಂಗ್ ಕೂಡ ಕಾಲಿಟ್ಟಿದೆ ಹುಷಾರ್

ನಗರದ ಕೊಡಿಗೆಹಳ್ಳಿಯಲ್ಲಿ ನೇಪಾಳ ಮೂಲದ ದಂಪತಿಯ ಮಕ್ಕಳು ಎಂದಿನಂತೆ ಆಟವಾಡಲು ಹೋಗಿದ್ದರು. ಆದ್ರೆ, ಸ್ವಲ್ಪ ಸಮಯದ ನಂತರ ಏಕಾಏಕಿ ಮಕ್ಕಳು ನಾಪತ್ತೆಯಾಗಿದ್ದಾರೆ. ಬಳಿಕ ಗಾಬರಿಗೊಂಡ ದಂಪತಿ ಕೊಡಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ಕೊಡ್ತಾರೆ. ಆದ್ರೆ, ಸ್ವಲ್ಪ ಸಮಯದ ನಂತರ ಪೊಲೀಸರಿಗೆ ಮಕ್ಕಳು ಸಿಕ್ಕಿರೋ ಬಗ್ಗೆ ಮಾಹಿತಿ ಸಿಗುತ್ತೆ.

ಮಕ್ಕಳನ್ನ ಕಿಡ್ನ್ಯಾಪ್ ಮಾಡಿದ್ರಾ..?

ಅಂದಹಾಗೆ ಕಳ್ಳ ದಂಪತಿ ಹೆಸರು ಬಲರಾಮ್ ಮತ್ತು ಪ್ರಮೀಳಾ ದೇವಿ. ಮೂಲತಃ ಬಿಹಾರದವರು. ಅದ್ಯಾವಾಗ ಮುದ್ದಾದ ಮಕ್ಕಳು ಆಟವಾಡ್ತಿದ್ದನ್ನ ನೋಡಿದ್ರೋ ಸೀದಾ ಮಕ್ಕಳನ್ನ ಕಿಡ್ನ್ಯಾಪ್ ಮಾಡ್ತಾರೆ. ಇನ್ನು, ಕದ್ದ ಮಕ್ಕಳನ್ನ ಬಿಹಾರಕ್ಕೆ ಕರ್ಕೊಂಡು ಎಸ್ಕೇಪ್ ಆಗೋಣ ಅಂತಾ ಪ್ಲಾನ್ ಮಾಡಿದ ದಂಪತಿ ಯಶವಂತಪುರ ರೈಲ್ವೇ ಸ್ಟೇಷನ್​ಗೆ ಬರ್ತಾರೆ.

ಆದ್ರೆ, ಈ ವೇಳೆ ಯಶವಂತಪುರ ರೈಲ್ವೇ ಪೊಲೀಸರು ಬಿಹಾರಿ ದಂಪತಿಯ ಅನುಮಾನಸ್ಪದ ನಡೆ ಕಂಡು ವಿಚಾರಿಸಿದ್ದಾರೆ. ಅಷ್ಟೇ ಮಕ್ಕಳನ್ನು ಬಿಹಾರಿ ದಂಪತಿಗಳು ಕಿಡ್ನ್ಯಾಪ್ ಮಾಡಿಕೊಂಡು ಹೋಗ್ತಿರೋದು ಗೊತ್ತಾಗುತ್ತೆ. ಈ ವೇಳೆ ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ ಕಳ್ಳ ದಂಪತಿ ಚಲನವಲನ ಸೆರೆಯಾಗಿತ್ತು. ಈ ಸಮಯದಲ್ಲೇ ಯಶವಂತಪುರ ರೈಲ್ವೇ ಪೊಲೀಸರು ಕೊಡಿಗೆಹಳ್ಳಿ ಪೊಲೀಸರಿಗೆ ಮಕ್ಕಳ ಕಳ್ಳರು ಸೆರೆಸಿಕ್ಕಿರೋ ಮಾಹಿತಿ‌ ನೀಡಿದ್ರು. ಮಾಹಿತಿ ಪಡೆದ ಪೊಲೀಸರು ಬಿಹಾರದ ಬಲರಾಮ್ ಮತ್ತು ಪ್ರಮೀಳಾ ದೇವಿಯನ್ನು ವಶಕ್ಕೆ ಪಡೆದು ಮಕ್ಕಳನ್ನು‌ ಸುರಕ್ಷಿತವಾಗಿ ಕರೆ ತಂದಿದ್ದಾರೆ.

ಸದ್ಯ ಕೊಡಿಗೆಹಳ್ಳಿ ಪೊಲೀಸರು ಮಕ್ಕಳ ಕಿಡ್ನ್ಯಾಪ್ ಮಾಡಿದ್ದ ದಂಪತಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಮಕ್ಕಳನ್ನು ಯಾವ ಕಾರಣಕ್ಕೆ ಕಿಡ್ನ್ಯಾಪ್ ಮಾಡಿಕೊಂಡು ಹೋಗುತ್ತಿದ್ದರು. ಇವರ ಗ್ಯಾಂಗ್​​ನಲ್ಲಿ ಮತ್ಯಾರಾದರು ಇದ್ದಾರಾ? ಅನ್ನೋದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಮಕ್ಕಳನ್ನು ಹೆತ್ತು ಹೊತ್ತು ಸಾಕುವ ಪೋಷಕರು ಸದಾ ಎಚ್ಚರಿಕೆಯಿಂದ ಇರಬೇಕಾಗಿದೆ.

Related Articles

Back to top button
error: Content is protected !!