ಕರಾವಳಿ
ಮಂಡಾಡಿ ನಿವೃತ್ತ ಕಾರ್ಯನಿರ್ವಾಹಕ ಇಂಜಿನಿಯರ್ ರತ್ನಾಕರ್ ಶೆಟ್ಟಿ ನಿಧನ

Views: 97
ಕುಂದಾಪುರ :ಲೋಕೋಪಯೋಗಿ ಇಲಾಖೆಯ ನಿವೃತ್ತ ಕಾರ್ಯನಿರ್ವಾಹಕ ಇಂಜಿನಿಯರ್ ಮಂಡಾಡಿ ರತ್ನಾಕರ್ ಶೆಟ್ಟಿ (80) ಜು.23 ರಂದು ನಿಧನರಾದರು.
ಮೃತರು ಪತ್ನಿ ಪುತ್ರ ಕುಂದಾಪುರ ನ್ಯೂ ಮೆಡಿಕಲ್ ಆಸ್ಪತ್ರೆಯ ಡಾ.ರಂಜನ್ ಶೆಟ್ಟಿ ಸೇರಿದಂತೆ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
1973 ರಲ್ಲಿ ಕರ್ನಾಟಕ ಇರಿಗೇಶನ್ ಡಿಪಾರ್ಟ್ಮೆಂಟ್ ನಲ್ಲಿ ಅಸಿಸ್ಟೆಂಟ್ ಇಂಜಿನಿಯರ್ ಆಗಿ ಪಬ್ಲಿಕ್ ಸರ್ವಿಸ್ ನಿಂದ ಆಯ್ಕೆಯಾದ ಅವರು ಕರ್ನಾಟಕದ ಹಲವಾರು ಕಡೆ ಸೇವೆ ಸಲ್ಲಿಸಿದ್ದಾರೆ.
ಮಂಡಾಡಿ ಹೋರ್ವರಮನೆ ಸಾಂಪ್ರದಾಯಿಕ ಕಂಬಳ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಇವರು ಜಿಲ್ಲಾ ಲಯನ್ಸ್, ಮೊಳಹಳ್ಳಿ, ಹುಣ್ಸೆಮಕ್ಕಿ ಲಯನ್ಸ್ ಕ್ಲಬ್ ನ ಮಾಜಿ ಅಧ್ಯಕ್ಷರಾಗಿ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಇವರ ನಿಧನಕ್ಕೆ ಮಾಜಿ ಶಾಸಕರಾದ ಪ್ರತಾಪ್ ಚಂದ್ರ ಶೆಟ್ಟಿ, ಹಾಲಾಡಿ ಶ್ರೀನಿವಾಸ್ ಶೆಟ್ಟಿ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮುಂತಾದ ಗಣ್ಯರು ಸಂತಾಪ ಸೂಚಿಸಿದ್ದಾರೆ.






