ಕರಾವಳಿ

ಮಂಗಳೂರು :ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಹಾರಿದ ಕಾರು; ಇಬ್ಬರು ಮರ ಹಿಡಿದುಕೊಂಡು ಪಾರು!

Views: 160

ಮಂಗಳೂರಲ್ಲಿ ಭಾರಿ ಮಳೆಗೆ ಸೇತುವೆಯಿಂದ ಹಾರಿ ಕಾರೊಂದು ಹೊಳೆಗೆ ಬಿದ್ದು, ಇಬ್ಬರು ಪವಾಡದಂತೆ ಪಾರಾಗಿದ್ದಾರೆ.

ಮಂಗಳೂರು:ಕೆಲವು ದಿನಗಳಿಂದ ಕರಾವಳಿಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಎಲ್ಲಾ ನದಿಗಳು ತುಂಬಿ ಹರಿಯುತ್ತಿರುವುದರಿಂದ ಜನರು ಪರದಾಡುವ ಸ್ಥಿತಿ ಉದ್ಭವಿಸಿ, ಅವಾಂತರವೇ ಸೃಷ್ಟಿಯಾಗಿದೆ. ಮಂಗಳೂರಿನ ಗಡಿಭಾಗ ಕಾಸರಗೋಡಿನಲ್ಲಿ ಕಾರೊಂದು ತಡೆ ಬೇಲಿ ಇಲ್ಲದ ಸೇತುವೆಯಿಂದ ಹೊಳೆಗೆ ಹಾರಿದೆ ಕಾರಿನಲ್ಲಿದ್ದ ಇಬ್ಬರ ರಕ್ಷಣೆ ಮಾಡಲಾಗಿದ್ದು, ಕಾರು ನೀರುಪಾಲಾಗಿದೆ.

ರಶೀದ್, ತಸ್ರೀಫ್ ಎಂಬುವವರು ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ತಡೆಬೇಲಿ ಇಲ್ಲದ ಕಾರಣ, ನಿಯಂತ್ರಣ ತಪ್ಪಿದ ಕಾರು ಸೇತುವೆಯಿಂದ ಹೊಳೆಗೆ ಬಿದ್ದಿದೆ. ತುಂಬಿ ಹರಿಯುತ್ತಿದ್ದ ಹೊಳೆಯಲ್ಲೇ ಮರವನ್ನು ಹಿಡಿದು ಇಬ್ಬರು ಪ್ರಾಣ ಉಳಿಸಿಕೊಂಡಿದ್ದಾರೆ.ನಂತರ ಅಗ್ನಿಶಾಮಕ ದಳದವರು ಇಬ್ಬರನ್ನು ಮೇಲಕ್ಕೆ ಎತ್ತುವಲ್ಲಿ ಯಶಸ್ವಿಯಾಗಿದ್ದಾರೆ.

Related Articles

Back to top button
error: Content is protected !!