ಜನಮನ
ಮಂಗಳೂರು ನೀರಿನ ಹೊಂಡಕ್ಕೆ ಬಿದ್ದು ಯುವಕರಿಬ್ಬರ ದುರ್ಮರಣ

Views: 0
ಮಂಗಳೂರು ಹೊರವಲಯದಲ್ಲಿ ಯುವಕರಿಬ್ಬರೂ ಆಕಸ್ಮಿಕವಾಗಿ ಕಾಲು ಜಾರಿ ನೀರಿನ ಹೊಂಡಕ್ಕೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
27 ವರ್ಷದ ವರುಣ್ 28 ವರ್ಷದ ವೀಕ್ಷಿತ್ ಮೃತಪಟ್ಟವರು.
ವರುಣ್ ಮಂಗಳೂರಿನ ಅಳಪೆ ನಿವಾಸಿಯಾಗಿದ್ದು, ,ವೀಕ್ಷಿತ್ ಎಕ್ಕೂರು ನಿವಾಸಿಯಾಗಿದ್ದರು.
ಅಳಪೆ ಪಡ್ಪು ಎಂಬಲ್ಲಿ ಕಾಮಗಾರಿಗಾಗಿ ತೆಗೆದಿಟ್ಟ ನೀರು ತುಂಬಿದ ಹೊಂಡದಲ್ಲಿ ಆಯತಪ್ಪಿ ಯುವಕರಿಬ್ಬರೂ ಬಿದ್ದಿದ್ದಾರೆ.
ಪೊಲೀಸ್ ಮತ್ತು ಅಗ್ನಿಶಾಮಕ ದಳದವರಿಗೆ ವಿಷಯ ತಿಳಿಸಲಾಯಿತು.ಅವರು ಬರುವಷ್ಟರಲ್ಲಿ ನೀರಿನಲ್ಲಿ ಮುಳುಗಿ ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






