ಇತರೆ
ಮಂಗಳೂರು:ಮದುವೆಯಾಗುವುದಾಗಿ ಅತ್ಯಾಚಾರವೆಸಗಿ ವಕೀಲೆಗೆ ವಂಚನೆ, ಎಸ್‌ಎಎಫ್ ಕಾನ್ಸ್‌ಟೇಬಲ್ ಬಂಧನ

Views: 115
ಕನ್ನಡ ಕರಾವಳಿ ಸುದ್ದಿ: ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ನಡೆಸಿದ ದೂರಿನ ಮೇರೆಗೆ ಮಂಗಳೂರಿನ ಪೊಲೀಸ್ ಕಾನ್ಸ್ ಟೇಬಲ್ ಸಿದ್ದೇಗೌಡ ಎಂಬಾತನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನಲ್ಲಿ ನಾಲ್ಕು ತಿಂಗಳ ಹಿಂದೆ ರಚನೆಯಾಗಿರುವ ಕೋಮು ಸಂಘರ್ಷ ವಿರೋಧಿ ದಳದಲ್ಲಿ (ಎಸ್‌ಎಎಫ್) ಕಾನ್ಸ್‌ಟೇಬಲ್ ಆಗಿರುವ ಸಿದ್ದೇಗೌಡ ಎಂಬವರ ವಿರುದ್ಧ ಅತ್ಯಾಚಾರದ ಆರೋಪ ಕೇಳಿಬಂದಿದೆ. ವೃತ್ತಿಯಲ್ಲಿ ವಕೀಲೆಯಾಗಿರುವ ಯುವತಿಯನ್ನು ಮದುವೆಯಾಗುತ್ತೇನೆಂದು ನಂಬಿಸಿ ಲೈಂಗಿಕ ಸಂಪರ್ಕ ಬೆಳೆಸಿದ್ದರು ಎನ್ನಲಾಗ್ತಿದೆ.
ಯುವತಿ ದೂರಿನ ಮೇಲೆ ಬೆಂಗಳೂರಿನ ಬಸವೇಶ್ವರ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು ಪೊಲೀಸರು ಆರೋಪಿ ಸಿದ್ದೇಗೌಡನನ್ನು ಬಂಧಿಸಿದ್ದಾರೆ. ಸಿದ್ದೇಗೌಡ ನಂಬಿಸಿ ಅತ್ಯಾಚಾರಗೈದು ಬಳಿಕ ಮದುವೆಯಾಗಲು ನಿರಾಕರಿಸಿದ್ದಾರೆ ಎಂದು ಯುವತಿ ಆರೋಪ ಮಾಡಿದ್ದಾರೆ. ಆರೋಪಿ ಸಿದ್ದೇಗೌಡನನ್ನು ಪೊಲೀಸರು ಬಂಧಿಸಿ ಕೋರ್ಟಿಗೆ ಹಾಜರು ಪಡಿಸಿದ್ದು ನ್ಯಾಯಾಂಗ ಬಂಧನಕ್ಕೆ ನೀಡಿದೆ.