ಕರಾವಳಿ

ಮಂಗಳೂರಿನ ಯೆಯ್ಯಾಡಿಯಲ್ಲಿ ಮಧ್ಯರಾತ್ರಿ  ಗೆಜ್ಜೆ ಸದ್ದು.. ಬೆಂಕಿಯ ರೂಪದಲ್ಲಿ ದೈವದ ಸಂಚಾರ…!  

Views: 115

ಮಂಗಳೂರು,  ಇಡೀ ಊರಿಗೇ ಊರೇ ಕೇಳುವಂತಹ ದೈವದ ಗೆಜ್ಜೆ ಸದ್ದು ಈಗ ಮಂಗಳೂರಿನ ಯೆಯ್ಯಾಡಿಯಲ್ಲಿ ಕೇಳಿಸಿದೆ.

ಮಧ್ಯರಾತ್ರಿ ದೈವದ ಸವಾರಿಗೆ ನೂರಾರು ಜನರು ಪ್ರತ್ಯಕ್ಷ ಸಾಕ್ಷಿಗಳಾಗಿದ್ದು, ದೈವ ಸಂಚಾರದ ವಿಡಿಯೋ ಒಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಮಧ್ಯ ರಾತ್ರಿ ಗೆಜ್ಜೆ ಸದ್ದು ಹಾಗು ಬೆಂಕಿಯ ರೂಪದಲ್ಲಿ ದೈವದ ಸಂಚಾರ ಆಗುವ ವಿಸ್ಮಯಕಾರಿ ದೃಶ್ಯ ಸ್ಥಳೀಯ ನಿವಾಸಿಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಮಂಗಳೂರಿನ ಏಯ್ಯಾಡಿ ಇಂಡಸ್ಟ್ರಿಯಲ್ ಏರಿಯಾದ ಲಿಯೋ ಕ್ರಾಸ್ತಾ ಕಾಂಪೌಂಡ್‌ನಲ್ಲಿ ನಿರಂತರವಾಗಿ ದೈವದ ಗೆಜ್ಜೆ ಸದ್ದು ಕೇಳಿ ಬರುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಮಧ್ಯರಾತ್ರಿ ಒಂದೆರೆಡು ಗಂಟೆಯ ಸಂಧರ್ಭದಲ್ಲಿ ದೈವದ ಸಂಚಾರ ಆರಂಭವಾಗುತ್ತಿದ್ದು,ಪ್ರದೇಶದ ಎರಡು ಮಾರ್ಗ ಜೋಡುವ ಸ್ಥಳದಿಂದ ದೈವದ ಹೆಜ್ಜೆ ಸದ್ದು ಕೇಳಿಸುತ್ತಿದೆ. ಜನ ನಂಬುವ ದೈವ ರಕ್ತೇಶ್ವರಿಯ ವಲಸೆ ಇದು ಎನ್ನುವುದು ಸ್ಥಳೀಯ ಜನರ ನಂಬಿಕೆಯಾಗಿದ್ದು, ಜನರ ನಂಬಿಕೆಯಂತೆಯೇ ದೈವದ ಸದ್ದು ದೈವ ಆರಾಧನೆಗೊಳ್ಳುವಂತಹ ಮರದ ಬಳಿಯೇ ಕೊನೆಯಾಗುತ್ತಿದೆ.

ಸಾಮಾಜಿಕ ಕಾರ್ಯಕರ್ತ ದೀಪು ಶೆಟ್ಟಿಗಾರ್ ಕಳೆದ ಹಲವು ವರ್ಷಗಳಿಂದ ಆ ಪ್ರದೇಶದ ನಾಗನ ಬನಕ್ಕೆ ದೀಪ ಇಟ್ಟು ಆರಾಧನೆ ಮಾಡುತ್ತಿದ್ದು, ಆ ಸ್ಥಳದಲ್ಲಿಯೇ ಮೊದಲು ಅವರಿಗೆ ದೈವದ ಹೆಜ್ಜೆ ಸದ್ದು ಕೇಳಿಸಿದೆ. ಯಾರೋ ನಡೆದುಕೊಂಡು ಹೋಗುವಂತೆ, ಹಿಂಬಾಲಿಸುವಂತೆ ಅನುಭವವಾಗಿದ್ದು,ಈ ಬಗ್ಗೆ ಪ್ರಶ್ನಾ ಚಿಂತನೆಯಲ್ಲಿ ಕೇಳಿದ್ರೆ ಬನದ ಪಕ್ಕದಲ್ಲೇ ಇರುವ ರೆಂಜಿರ್ ಮರದಲ್ಲಿ ರಕ್ತೇಶ್ವರಿ ದೈವದ ಸಾನಿಧ್ಯವಿರೋದು ಗೊತ್ತಾಗಿದೆ. ಬಳಿಕ ರಕ್ತೇಶ್ವರಿಯ ಆರಾಧನೆಯನ್ನೂ ದೀಪು ಶೆಟ್ಟಿಗಾರ್ ಮಾಡುತ್ತಿದ್ದು, ಈ ದೈವ ಪ್ರತಿದಿನ ರಾತ್ರಿ ಸಂಚಾರ ಮಾಡುವ ಅನುಭವ ಜನರಿಗೆ ಆಗಿಯಂತೆ.

ಈ ಗೆಜ್ಜೆ ಸದ್ದು ಮತ್ತು ಬೆಳಕಿನ ಬಗ್ಗೆ ದೀಪು ಶೆಟ್ಟಿಗಾರ್ ವಿಡಿಯೋ ಮಾಡಿದ್ದು ಸಾವಿರಾರು ಜನರ ಕುತೂಹಲ ಕ್ಕೆ ಕಾರಣವಾಗಿದೆ‌. ಆಶ್ಚರ್ಯವೆಂಬತೇ ಆ ಗೆಜ್ಜೆ ಸದ್ದು ಬಂದ ಸ್ಥಳದಲ್ಲಿ ಯಾವ ದೃಶ್ಯವೂ ಕಂಡುಬರೋದಿಲ್ಲ. ಕೇವಲ ನಡೆದುಕೊಂಡು ಹೋಗುವ ಸದ್ದು ಮಾತ್ರ ಕೇಳಿಸುತ್ತದೆ ಅಂತೇ…ಹೀಗಾಗಿ ದೈವ ತನ್ನ ಇರುವಿಕೆಯನ್ನು ತೋರಿಸುತ್ತಿದೆ ಅನ್ನೋದು ಜನರ ನಂಬಿಕೆಯಾಗಿದೆ.

 

 

Related Articles

Back to top button
error: Content is protected !!