ಇತರೆ

ಭೀಕರ ರಸ್ತೆ ಅಪಘಾತ; ಬಸ್ಸಿನ ಅಡಿಗೆ ಆಟೋ ಸಿಲುಕಿ ಆರು ಮಂದಿ ದುರ್ಮರಣ

Views: 153

ಕನ್ನಡ ಕರಾವಳಿ ಸುದ್ದಿ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಗುದ್ದಿದ ಪರಿಣಾಮ ಆಟೋರಿಕ್ಷಾದಲ್ಲಿ ತೆರಳುತ್ತಿದ್ದ ಆರು ಮಂದಿ ಸಾವನ್ನಪ್ಪಿರುವ ಘಟನೆ ಗುಜರಾತ್ ಪಟಣ್ ಜಿಲ್ಲೆಯಲ್ಲಿ ಗುರುವಾರ ಸಂಭವಿಸಿದೆ.

ಸಾರಿಗೆ ಸಂಸ್ಥೆಯ ಬಸ್ ಹಿಮ್ಮತ್ನಗರದಿಂದ ಕಚ್ ಕಡೆಗೆ ತೆರಳುತ್ತಿತ್ತು. ಆಟೋರಿಕ್ಷಾ ವಿರುದ್ಧ ಧಿಕ್ಕಿನಿಂದ ಬರುತ್ತಿತ್ತು. ಈ ವೇಳೆ ಬಸ್ ಡಿಕ್ಕಿ ಹೊಡೆದಿದೆ ಎಂದು ಪಟಣ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ ಕೆ ನಾಯಿ ಮಾಹಿತಿ ನೀಡಿದ್ದಾರೆ.

ಆಟೋದಲ್ಲಿ ಬರುತ್ತಿದ್ದ ಚಾಲಕ ಸೇರಿದಂತೆ ಎಲ್ಲ ಆರು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತ ಭೀಕರತೆ ಎಷ್ಟಿತ್ತೆಂದರೆ ಬಸ್ಸಿನ ಅಡಿಯಲ್ಲಿ ಸಿಲುಕಿ ಆಟೋ ಅಂಪೂರ್ಣ ನಜ್ಜುಗುಜ್ಜಾಗಿದೆ ಎಂದು ಎಸ್ಪಿ ತಿಳಿಸಿದರು.

ಇದರಲ್ಲಿ ಬಸ್ ಡ್ರೈವರ್ ಪ್ರಮುಖ ಆರೋಪಿಯಾಗಿದ್ದು, ಬಸ್ಸಿನ ವ್ಹೀಲ್ಗಳ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದು, ಮತ್ತೊಂದು ವಾಹನವನ್ನು ಓವರ್ಟೇಕ್ ಮಾಡಲು ಮುಂದಾಗಿದ್ದು ಅಪಘಾತಕ್ಕೆ ಕಾರಣವಾಗಿದೆ. ಸ್ಥಳೀಯ ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಘಟನೆಯ ಬಗ್ಗೆ ವಿವರಿಸಿದರು.

 

Related Articles

Back to top button
error: Content is protected !!