ಇತರೆ

ಭೀಕರ ಅಪಘಾತ:ಡಿವೈಡರ್ ಗೆ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲೇ ಮೂವರು ದುರ್ಮರಣ

Views: 137

ಕನ್ನಡ ಕರಾವಳಿ ಸುದ್ದಿ: ಡಿವೈಡರ್ ಗೆ  ಡಿಕ್ಕಿ ಹೊಡೆದು ಕಾರು ಪಲ್ಟಿಯಾಗಿ ರಸ್ತೆ ಪಕ್ಕದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

ಇಲ್ಲಿನ ನಾಗಮಂಗಲ ಬಳಿಯ ನಾಗತಿಹಳ್ಳಿಯಲ್ಲಿ ಈ ದುರಂತ ಸಂಭವಿಸಿದೆ. ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಚನ್ನೇಗೌಡ (60), ಸರೋಜಮ್ಮ (55) ಹಾಗೂ ಜಯಮ್ಮ(70) ಎಂದು ಗುರುತಿಸಲಾಗಿದೆ.

ಮೂವರೂ ಚಿಕ್ಕಮಗಳೂರು ಮೂಲದವರಾಗಿದ್ದು, ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಕಾರಿನಲ್ಲಿ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ.

Related Articles

Back to top button
error: Content is protected !!