ಕರಾವಳಿ
ಭಾರೀ ಕಡಲಬ್ಬರ : ನೀರಿಗೆ ಇಳಿಯದಂತೆ ಎಚ್ಚರ

Views: 0
ಕುಂದಾಪುರ: ಚಂಡಮಾರುತ ಮತ್ತು ಮುಂಗಾರು ಪ್ರವೇಶದೊಂದಿಗೆ ಕರಾವಳಿಯುದ್ಧಕ್ಕೂ ಸಮುದ್ರದಲ್ಲಿ ಭಾರಿ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಉಭಯ ಜಿಲ್ಲೆಗಳ ಬೀಚ್ ಗಳಲ್ಲಿ ಸುರಕ್ಷಾ ಕ್ರಮ ಕೈಗೊಳ್ಳಲಾಗಿದೆ.
ತ್ರಾಸಿ- ಮರವಂತೆ, ಕುಂದಾಪುರ ಇಲ್ಲಿಗೆ ಬರುವ ಪ್ರವಾಸಿಗಳಿಗೆ ನಿಯಮಗಳನ್ನು ಉಲ್ಲಂಘಿಸದಂತೆ ಜಿಲ್ಲಾಡಳಿತದ ಆದೇಶದಂತೆ ಸಮುದ್ರದ ನೀರಿಗೆ ಇಳಿಯದಂತೆ ಎಚ್ಚರಿಕೆ ನೀಡಿ, ಜೀವ ರಕ್ಷಕ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಮರವಂತೆ ತ್ರಾಸಿಯಲ್ಲಿ ಇಬ್ಬರು ಸೇವಾ ರಕ್ಷಕರಿದ್ದು, ಕುಂದಾಪುರ ಬೀಚಿನಲ್ಲಿ ಸೇವಾ ರಕ್ಷಕರಿಲ್ಲದೆ, ಅಲ್ಲಲ್ಲಿ ಮಾಹಿತಿ ಫಲಕಗಳನ್ನು ಅಳವಡಿಸಲಾಗಿದೆ.ಗಂಗೊಳ್ಳಿಯಲ್ಲಿ ಅಂಬುಲೆನ್ಸ್ ಸ್ವಯಂ ಸೇವಕರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಎಚ್ಚರಿಕೆಯ ಫಲಕ ಹಾಗೂ ರಿಬ್ಬನ್ ಅಳವಡಿಸಿದ್ದಾರೆ. ಜಿಲ್ಲೆಯಲ್ಲಿ ವಿಪತ್ತುಗಳಿಗೆ ತುತ್ತಾಗುವ ಪ್ರದೇಶಗಳನ್ನು ಗುರುತಿಸಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಮನ್ವಯದಿಂದ ಮೇಲ್ವಿಚಾರಣೆಗೆ ಸೂಚಿಸಿ, ಸನ್ನದ್ಧವಾಗಿದೆ.






