ಭಾರತದ ಪಾಲಿಗೆ ಇಂದು ಅತ್ಯಂತ ಕಡಿಮೆ ಅವಧಿಯ ದಿನ! ಏನು ಕಾರಣ?

Views: 1
ಭಾರತದ ಪಾಲಿಗೆ ಇಂದು ಡಿಸೆಂಬರ್ 22 ವಿಶೇಷ ದಿನವಾಗಲಿದೆ. ಇದು ಅತ್ಯಂತ ಕಿರಿಯ ಅಥವಾ ಕಡಿಮೆ ಅವಧಿಯ ದಿನವಾಗಲಿದೆ.
ಪ್ರತಿ ಡಿ.22ರಂದು ಈ ಖಗೋಳ ವಿಸ್ಮಯ ಘಟಿಸುತ್ತದೆ ಮತ್ತು ಇದು ಉತ್ತಾರಾಯಣದ ಆರಂಭದ ಸೂಚಕವೂ ಆಗಿರುತ್ತದೆ.
ಭೂಮಿಯ ತಿರುಗುವಿಕೆಯನ್ನು ಪರಿಗಣಿಸಿ ಸೂರ್ಯನು ಡಿಸೆಂಬರ್ 22, 2023ರಂದು ಮಕರ ಸಂಕ್ರಾಂತಿ ವೃತ್ತಕ್ಕೆ ಲಂಬವಾಗಿರುತ್ತಾನೆ. ಈ ದಿನ ಸೂರ್ಯನ ತಿರುಗುವಿಕೆಯು 17 ವಿಕಲ ದಕ್ಷಿಣದಲ್ಲಿ 23 ಡಿಗ್ರಿ ಮತ್ತು 26 ಡಿಗ್ರಿಗಳ ನಡುವೆ ಇರುತ್ತದೆ. ಈ ಕಾರಣದಿಂದಾಗಿ ಭಾರತ ಸೇರಿದಂತೆ ಉತ್ತರ ಗೋಳಾರ್ಧದಲ್ಲಿ ನೆಲೆಗೊಂಡಿರುವ ದೇಶಗಳು ಕಡಿಮೆ ಹಗಲು ಮತ್ತು ದೀರ್ಘ ರಾತ್ರಿಯನ್ನು ಹೊಂದಿರುತ್ತವೆ.
ಸರ್ಕಾರಿ ಜಿವಾಜಿ ವೀಕ್ಷಣಾಲಯದ ಅಧೀಕ್ಷಕ ಡಾ ರಾಜೇಂದ್ರ ಗುಪ್ತ್ ಅವರ ಪ್ರಕಾರ, ಪ್ರತಿ ವರ್ಷ ಡಿಸೆಂಬರ್ 22 ರಂದು ಖಗೋಳ ವಿಸ್ಮಯ ಘಟನೆ ನಡೆಯಲಿದ್ದು, ಈ ಶುಕ್ರವಾರ ಕಡಿಮೆ ಅಥವಾ ಕಿರಿಯ ದಿನವಾಗಿರುತ್ತದೆ. ಮಧ್ಯ ಪ್ರದೇಶದ ಉಜ್ಜೈನ್ನಲ್ಲ ಸೂರ್ಯೋದವು ಬೆಳಗ್ಗೆ 7.05ಕ್ಕೆ ಆಗಲಿದ್ದು, ಸೂರ್ಯಾಸ್ತವು ಸಂಜೆ 5.46ಕ್ಕೆ ನಡೆಯಲಿದೆ. ಆಗ ದಿನದ ಒಟ್ಟು ಗಂಟೆಗಳು 10 ಗಂಟೆ 41 ನಿಮಿಷ ಇದ್ದರೆ, ರಾತ್ರಿಯ ಅವಧಿ 13 ಗಂಟೆ 19 ನಿಮಿಷ ಇರಲಿದೆ. ಈ ಸಮಯದಲ್ಲಿ ಸೂರ್ಯನು ಸಯಾನ್ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಈ ದಿನ ಸೂರ್ಯನು ಮಕರ ರಾಶಿಯಲ್ಲಿ 0 ಡಿಗ್ರಿಯಲ್ಲಿ ಇರುತ್ತಾನೆ.
ಸೂರ್ಯನ ಚಲನೆಯು ಉತ್ತರದ ಗೋಚರವಾಗುತ್ತ ಹೋಗುತ್ತದೆ. ಇದನ್ನೇ ಉತ್ತರಾಯಣದ ಆರಂಭ ಎಂದು ಕರೆಯಲಾಗುತ್ತದೆ. ಉತ್ತರದ ಕಡೆಗೆ ಸೂರ್ಯನ ಚಲನೆಯ ಪರಿಣಾಮ ದಿನವು ನಿಧಾನವಾಗಿ ದೀರ್ಘವಾಗಿರುತ್ತದೆ. ಹಾಗೆಯೇ, ರಾತ್ರಿಗಳು ಕಿರಿದಾಗುತ್ತವೆ. ಮಾರ್ಚ್ 21ರಂದು ಸೂರ್ಯನು ಸಮಭಾಜಕದಲ್ಲಿ ಇರುತ್ತಾನೆ. ಆಗ ಹಗಲು ರಾತ್ರಿ ಸಮಾನವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.






