ಜನಮನ

ಭದ್ರಾವತಿ ಹೊಸ ಸೇತುವೆ ಪಕ್ಕದ ಪೊದೆಯಲ್ಲಿ ಹೆಣ್ಣು ಮಗು ಪತ್ತೆ

Views: 1

 

ಭದ್ರಾವತಿ  ಹೊಸ ಸೇತುವೆ ಪಕ್ಕದ ಪೊದೆಯಲ್ಲಿ ಸುಮಾರು 5 ರಿಂದ 6 ತಿಂಗಳ ಮಗು ಪತ್ತೆಯಾಗಿದೆ.

ಸೀಳು ತುಟಿ ಹೊಂದಿರುವ ಹೆಣ್ಣು ಮಗು ಸಿಕ್ಕಿದ್ದು ಡಿಸಿಪಿಯು ಘಟಕ ಮತ್ತು ಭದ್ರಾವತಿ ಹಳೆನಗರ ಪೊಲೀಸ್ ಠಾಣಾಧಿಕಾರಿಗಳು ಮಗುವನ್ನು ರಕ್ಷಿಸಿ ಶಿವಮೊಗ್ಗದ ಮಕ್ಕಳ ಕಲ್ಯಾಣ ಸಮಿತಿಗೆ ದಾಖಲಿಸಿದ್ದಾರೆ.

ಪುನರ್ವಸತಿ ಹಿತದೃಷ್ಟಿಯಿಂದ ಮಗುವಿನ ಸಂಬಂಧಿಕರು ಯಾರಾದರೂ ಇದ್ದಲ್ಲಿ ಅಥವಾ ಪೋಷಕರ ಮಾಹಿತಿ ದೊರೆತಲ್ಲಿ ಸೂಕ್ತ ದಾಖಲಾತಿಯೊಂದಿಗೆ ಅಧೀಕ್ಷಕರು, ಸರ್ಕಾರಿ ಬಾಲಕ ಬಾಲಮಂದಿರ, ಆಲ್ಕೊಳ, ಶಿವಮೊಗ್ಗ, ದೂ.ಸಂ: 08182-295511 ಗೆ ಸಂಪರ್ಕಿಸಬಹುದೆಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

Related Articles

Back to top button
error: Content is protected !!