ಕರಾವಳಿ
ಬ್ರಹ್ಮಾವರ:ಸಾೖಬ್ರಕಟ್ಟೆ ಸಮೀಪ ಶಾಲಾ ಬಸ್ಸಿಗೆ ಕಾರು ಡಿಕ್ಕಿ: ತಪ್ಪಿದ ಬಾರೀ ಅನಾಹುತ!

Views: 297
ಬ್ರಹ್ಮಾವರ: ಸಾೖಬ್ರಕಟ್ಟೆ ಸಮೀಪ ಶಾಲಾ ಬಸ್ಸಿಗೆ ಕಾರು ಡಿಕ್ಕಿಯಾಗಿ ಬಾರೀ ಅನಾಹುತ ತಪ್ಪಿದೆ.
ಯಡ್ತಾಡಿ ಕೂಡ್ಲಿ ತಿರುವಿನ ಸಮೀಪ ಶಾಲಾ ಬಸ್ಸಿನಲ್ಲಿ ಮಕ್ಕಳಿದ್ದು, ವೇಗವಾಗಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಬಸ್ಸಿಗೆ ಗುದ್ದಿದ ಪರಿಣಾಮ ಪಲ್ಟಿಯಾಗಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಶಾಲಾ ಬಸ್ಸಿನಲ್ಲಿದ್ದ ವಿದ್ಯಾರ್ಥಿಗಳಿಗೆ ಯಾವುದೇ ಹೆಚ್ಚಿನ ಹಾನಿಯಾಗಿಲ್ಲ.ಕಾರಿನೊಳಗಿದ್ದ ಮೂವರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.






