ಬ್ರಹ್ಮಾವರ:ಪ್ರಸ್ತಾವಿತ ಫ್ಲೈಓವರ್ ಕುರಿತು ಸಮಾಲೋಚನೆ, ನಿರ್ಮಾಣ ಕಾಮಗಾರಿ ಸೆಪ್ಟೆಂಬರ್‌ನಲ್ಲಿ!

Views: 63
ಕನ್ನಡ ಕರಾವಳಿ ಸುದ್ದಿ: ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಕುರಿತು ತಾಂತ್ರಿಕ ಸಮಿತಿಯಿಂದ ಮಹತ್ವದ ಸಭೆ ನಡೆದಿದ್ದು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಬ್ರಹ್ಮಾವರದಲ್ಲಿ ಪ್ರಸ್ತಾವಿತ ಫೈಓವರ್ ಸಾಧ್ಯತೆ ಕುರಿತು ಸಮಾಲೋಚನೆ ನಡೆಸಲಾಯಿತು.
ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳು ಮತ್ತು ನಾನಾ ಸಂಘಟನೆಗಳಿಂದ ಪ್ರತಿಭಟನೆ ನಡೆದಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ವರದಿ ಸಲ್ಲಿಸುವಂತೆ ಉಡುಪಿ ಜಿಲ್ಲಾಧಿಕಾರಿ ಸೂಚಿಸಿದ್ದರು.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಮತ್ತು ಅಧ್ಯಕ್ಷ ಜಾವಿದ್ ಅಜ್ಞಾ ಮಾತನಾಡಿ, ಫೈಓವರ್ ನಿರ್ಮಾಣ ಕಾಮಗಾರಿ ಸೆಪ್ಟೆಂಬರ್‌ನಲ್ಲಿ ಪ್ರಾರಂಭ ಮಾಡಲು ಸಾಧ್ಯತೆಯಿದೆ. ಫೈಓವರ್ ನಿರ್ಮಾಣದ ವೆಚ್ಚ ಸುಮಾರು 40 ಕೋಟಿ ರೂ. ಆಗಬಹುದು ಎಂದು ಸಭೆಗೆ ತಿಳಿಸಿದರು.
ವಾಹನ ತಪ್ಪು ದಿಕ್ಕಿನಲ್ಲಿ ಚಲಿಸುವುದನ್ನು ತಡೆಯಲು ಸರ್ವಿಸ್ ರಸ್ತೆ ನಿರ್ಮಿಸುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ನೀಡಲಾಗಿದೆ. ಈ ಪ್ರದೇಶದಲ್ಲಿ ಸುರಕ್ಷತೆಗಾಗಿ ಸಂಚಾರ ಸಿಗ್ನಲ್ ಗಳ ಅಳವಡಿಕೆ, ಕಡಿಮೆ ವೇಗ ಮಿತಿಗಳನ್ನು ವಿಧಿಸುವುದು ಮತ್ತು ವೇಗ ಬ್ರೇಕರ್‌ಗಳ ಬಳಕೆ ಮಾಡುವಂತೆ ತಹಸೀಲ್ದಾರ್ ಸೂಚಿಸಿದರು.ತಹಸೀಲ್ದಾರ್ ಶ್ರೀಕಾಂತ್ ಹೆಗ್ಡೆ ಸುದ್ದಿಗಾರರೊಂದಿಗೆ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡುವುದಾಗಿ ದೃಢಪಡಿಸಿದೆ. ಬ್ರಹ್ಮಾವರ ಆಕಾಶವಾಣಿ ಯಿಂದ ಬ್ರಹ್ಮಾವರ ಎಸ್ಎಂಎಸ್ ಬಸ್ ನಿಲ್ದಾಣ ವೃತ್ತದವರೆಗೆ ವಿಸ್ತರಿಸುವ ಪ್ರೈಓವರ್ ನಿರ್ಮಾಣದ ವೆಚ್ಚದ ಅಂದಾಜನ್ನು ಸಹ ಅವರು ಒದಗಿಸಿದ್ದಾರೆ. ಅಂತಿಮ ನಿರ್ಧಾರ ವರದಿಯನ್ನು ಏ.8ರಂದು ಜಿಲ್ಲಾಧಿಕಾರಿಗೆ ಸಲ್ಲಿಸಲಿದ್ದಾರೆ ಎಂದರು.