ಆರೋಗ್ಯ

ಬೋರ್ ವೆಲ್ ನಲ್ಲಿ ಸುರಿದ ಹಾಲು – ಪಾತ್ರೆ ಹಿಡಿದು ಓಡೋಡಿ ಬಂದ ಜನರು!

Views: 0

ಉತ್ತರ ಪ್ರದೇಶ: ಸಾಮನ್ಯವಾಗಿ ಬೋರ್ ವೆಲ್ ನಲ್ಲಿ ನೀರು ಬರುವದನ್ನು ನೋಡಿದ್ದೇವೆ ಆದರೆ ಇಲ್ಲೊಂದು ಕಡೆ ಹಾಲಿನ ಬಣ್ಣದ ನೀರು ಸುರಿದ ವಿಸ್ಮಯ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ ನಲ್ಲಿ ನಡೆದಿದೆ.

ಇಲ್ಲಿನ ಸಾರ್ವಜನಿಕ ಸ್ಥಳವೊಂದರಲ್ಲಿರುವ ಬೋರ್ ವೆಲ್ ನಲ್ಲಿ ನೀರಿನ ಬದಲು ಬಿಳಿ ಬಣ್ಣ ಇರುವ ನೀರು ಸುರಿದಿದೆ. ಇದನ್ನು ಕಂಡ ಸ್ಥಳಿಯರಿಗೆ ಅಚ್ಚರಿಯ ಪ್ರಶ್ನೆ ಮೂಡಿದೆ. ಅಲ್ಲದೆ ಇದೀಗ ಇದರ ವಿಡಿಯೋ ವೈರಲ್ ಆದ ಬೆನ್ನಲ್ಲೇ ಈ ಸ್ಥಳಕ್ಕೆ ಸಾಕಷ್ಟು ಜನ ಬಂದು ಸೇರಿದ್ದಾರೆ.

ಇದನ್ನು ಕಂಡ ಜನರು ಇದು ನೀರಲ್ಲ ಹಾಲು ಎಂದು ಪಾತ್ರ , ಬಾಟಲಿ ಹಾಗೂ ಕೈಗೆ ಸಿಕ್ಕಿದ ಪಾತ್ರವನ್ನು ಹಿಡಿದು ಓಡಾಡಿಕೊಂಡು ಬಂದು ಸರತಿ ಸಾಲಿನಲ್ಲಿ ನಿಂತು ತಮ್ಮ ಪಾತ್ರೆಗಳಿಗೆ ತುಮಬಿಸಿ ಮನೆಗೆ ಕೊಂಡೊಯ್ಯುತ್ತಿದ್ದರು. ಈ ವಿಚಾರ ತಿಳಿದ ಪುರಸಭೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆದರೆ ಇದು ಹಾಲಲ್ಲ ಇದು ಕಲುಷಿತ ನೀರು ಎಂದು ಸ್ಪಷ್ಟನೆ ನೀಡಿದ್ದಾರೆ. ಬೋರ್ ವೆಲ್ ನಲ್ಲಿರುವ ಹ್ಯಾಂಡ್ ಪಂಪ್ ನ ಕೆಳಭಾಗ ಹಾನಿಗೊಳಗಾದ ಕಾರಣ ಇದರಲ್ಲಿ ಹಾಲಿನ ಬಣ್ಣದ ಕಲುಷಿತ ನೀರು ಸೊರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿರುವುದು ವರದಿಯಾಗಿದೆ.

 

 

.

Related Articles

Back to top button