ಇತರೆ
ಬೋಟ್ ದುರಂತ : 300 ಮಂದಿ ಪಾಕ್ ಪ್ರಜೆಗಳು ಸಾವು, 12 ಮಂದಿ ಮಾತ್ರ ಬದುಕಿ ಉಳಿದವರು…..!

Views: 0
ಇಸ್ಲಾಮಾಬಾದ್ ಗ್ರೀಸ್ ನ ಕರಾವಳಿ ಪ್ರದೇಶದಲ್ಲಿ ಬೋಟ್ ದುರಂತದಲ್ಲಿ 300 ಮಂದಿ ಪಾಕ್ ಪ್ರಜೆಗಳು ಸಾವಿಗೀಡಾಗಿದ್ದು, ಕೇವಲ 12 ಮಂದಿ ಬದುಕುಳಿದಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ವಾರ ಪಾಕ್ ಪ್ರಜೆಗಳು ವಲಸೆ ಹೋಗುತ್ತಿದ್ದ ವೇಳೆ ಗ್ರೀಸ್ ಕರಾವಳಿ ಪ್ರದೇಶದಲ್ಲಿ ನೂರಾರು ಜನರಿದ್ದ ಬೋಟ್ ಮುಳುಗಿ 300 ಮಂದಿ ಪಾಕ್ ಪ್ರಜೆಗಳು ಸಾವನಪ್ಪಿದ್ದರು.
ಪಾಕಿಸ್ತಾನದ ಪ್ರಜೆಗಳ ದುರಂತ ಸಾವಿನ ಸ್ಮರಣಾರ್ಥ ಸೋಮವಾರ ರಾಷ್ಟ್ರೀಯ ಶೋಕಾಚರಣೆ ಆಚರಿಸಲಾಗುತ್ತಿದೆ. ಗ್ರೀಸ್ ನಲ್ಲಿ ನಡೆದ ಈ ಹಡಗು ದುರಂತವನ್ನು ಪ್ರಸಕ್ತ ವರ್ಷದ ಮಹಾ ದುರಂತ ಎಂದು ಹೇಳಲಾಗುತ್ತಿದೆ.






