ಜನಮನ

ಬೈಕ್ ಗಳ ನಡುವೆ ಡಿಕ್ಕಿ: ಉಪನ್ಯಾಸಕ, ಶಿಕ್ಷಕಿ ಸಾವು 

Views: 0

ಎರಡು ಬೈಕ್ ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಸರಕಾರಿ ಕಾಲೇಜು ಉಪನ್ಯಾಸಕ ಸೇರಿದಂತೆ ಇಬ್ಬರು ಮೃತಪಟ್ಟ ಘಟನೆ ಕೆಂಗೇರಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಾಮಸಂದ್ರದ ನಿವಾಸಿ ನರಸಪ್ಪ( 51) ಮತ್ತು ಉಳ್ಳಾಲದ ನಿವಾಸಿ ರಕ್ಷಾ( 21) ಮೃತರು.

ಈ ಘಟನೆಯಲ್ಲಿ ಗಂಭೀರ ಗಾಯಗೊಂಡಿರುವ ಚಂದನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ‌. ತಮ್ಮ ಗೆಳೆಯನ ಜೊತೆ ರಾತ್ರಿ 11:30ರ ಸುಮಾರಿಗೆ ರಕ್ಷಾ ಮನೆಗೆ ತೆರುತಿದ್ದರು. ಅದೇ ಹೊತ್ತಿನಲ್ಲಿ ನರಸಪ್ಪ ಅವರು ಕೂಡ ಮನೆಗೆ ಹೊರಟಿದ್ದರು. ಈ ವೇಳೆ ಉಲ್ಲಾಳದ ಮಾರುತಿ ನಗರ ಮುಖ್ಯ ರಸ್ತೆಯ ಕೆಎಲ್ಇ ಕಾಲೇಜ್ ಸಮೀಪ ನರಸಪ್ಪ ಅವರ ಬೈಕ್ ಗೆ ಚಂದನ್ ಅವರ ಬೈಕ್ ಡಿಕ್ಕಿ ಹೊಡಿದಿದೆ.

ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ರಕ್ಷಾ ಮತ್ತು ನರಸಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Related Articles

Back to top button
error: Content is protected !!