ಜನಮನ

ಬೈಕಾಡಿ ರಸ್ತೆ ಬದಿಯ ಚರಂಡಿ ಹೂಳೆತ್ತದೆ  ಆಗುವ ಅನಾಹುತ ತಡೆಗಟ್ಟಿ, ರಸ್ತೆಯ ಇಕ್ಕೆಲಗಳಲ್ಲಿ  ರಾಶಿ ರಾಶಿ ಕಸ ರೋಗ ಹರಡುವ ಭೀತಿ..!

Views: 32

ಬ್ರಹ್ಮಾವರ :ಇನ್ನೇನು ಕೆಲವೇ ದಿನಗಳಲ್ಲಿ ಮುಂಗಾರು ಮಳೆ ಪ್ರಾರಂಭವಾಗಲಿದ್ದು, ಮುಂಗಾರು ಮಳೆಯ ಪೂರ್ವ ತಯಾರಿಯಾಗಿ ಚರಂಡಿಯ ಹೂಳೆತ್ತುವ ಕಾರ್ಯವನ್ನು ಎಲ್ಲಾ ಕಡೆಯಲ್ಲೂ ಸಮರ್ಪಕವಾಗಿ ಸ್ಥಳೀಯ ಆಡಳಿತ ಮಾಡಬೇಕೆನ್ನುವುದು ಎಲ್ಲಾ ಗ್ರಾಮಸ್ಥರ ಆಗ್ರಹ.

ಹಾಗೆಯೇ ಬ್ರಹ್ಮಾವರ ತಾಲೂಕಿನ ಬೈಕಾಡಿ ಗಾಂಧಿನಗರದ ಬಸ್ ನಿಲ್ದಾಣದಿಂದ ಗಾಂಧಿನಗರಕ್ಕೆ ಹೋಗುವ ಮುಖ್ಯ ರಸ್ತೆಯ ಚರಂಡಿಯ ಹೂಳೆತ್ತದೆ ಇರುವುದರಿಂದ, ಮಳೆಯ ನೀರು ರಸ್ತೆಯಲ್ಲಿಯೇ ಹರಿದು ಮುಂಬರುವ ಮಳೆಗಾಲದಲ್ಲಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಾರೆ. ಈಗಾಗಲೇ ಸಾರ್ವಜನಿಕರು ಚರಂಡಿಯಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಿಸಾಡಿದ್ದು ರೋಗ ಹರಡುವ ಭೀತಿ ಉಂಟಾಗಿದೆ.

ಚರಂಡಿಯ ಹೂಳೆತ್ತಿ ಮತ್ತು ತ್ಯಾಜ್ಯಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಿದಲ್ಲಿ ಸಾರ್ವಜನಿಕರಿಗೆ ಮುಂದೆ ಆಗುವ ಅನಾನುಕೂಲವನ್ನು ತಪ್ಪಿಸಬಹುದು ಎಂಬುವುದು ಗ್ರಾಮಸ್ಥರ ಆಗ್ರಹವಾಗಿದೆ.

Related Articles

Back to top button
error: Content is protected !!