ಬೈಂದೂರು ಹೋಬಳಿ ಮಟ್ಟದ ಬಾಲಕಿಯರ ಕಬಡ್ಡಿ ಪಂದ್ಯಾಟ ಉದ್ಘಾಟನೆ
"ಕ್ರೀಡೆಯಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ"----ರಾಮಚಂದ್ರ ಬಿ ಶಿರೂರಕರ್.ಅಧ್ಯಕ್ಷರು ಜ್ಞಾನದಾ ಶಿಕ್ಷಣ ಸಂಸ್ಥೆ ಶಿರೂರು.

Views: 167
ಕನ್ನಡ ಕರಾವಳಿ ಸುದ್ದಿ: ಬೈಂದೂರು ಹೋಬಳಿ ಮಟ್ಟದ 14ರ ವಯೋಮಾನದ ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾಟದ ಉದ್ಘಾಟನಾ ಸಮಾರಂಭ ಅಗಸ್ಟ್ 8 ರಂದು ನಡೆಯಿತು.
ಶಿರೂರು ಜ್ಞಾನದಾ ಶೈಕ್ಷಣಿಕ ಸಂಸ್ಥೆಯ ಸಾರಥ್ಯದಲ್ಲಿ ನಡೆದ ಕಬ್ಬಡ್ಡಿ ಪಂದ್ಯಾಟವನ್ನು ಶಿರೂರು ಜ್ಞಾನದಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ರಾಮಚಂದ್ರ ಬಿ ಶಿರೂರಕರ್ ಉದ್ಘಾಟಿಸಿದರು,ಅವರು ಮಾತನಾಡಿ, ಕ್ರೀಡೆಯಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಎಲ್ಲರೂ ಕ್ರೀಡಾಸ್ಪೂರ್ತಿಯಿಂದ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಾಗೇಶ್ ನಾಯ್ಕ ಸಂಸ್ಥೆಯ ಶಿಸ್ತುಬದ್ದ ಕ್ರೀಡಾಕೂಟದ ವ್ಯವಸ್ಥೆಯನ್ನು ಶ್ಲಾಘಿಸಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಜ್ಞಾನದಾ ಶಿಕ್ಷಣ ಸಂಸ್ಥೆಯ ಖಜಾಂಚಿ ಚಂಪಾ ಆರ್ ಶಿರೂರಕರ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ವಿಜಯಕುಮಾರ್ ಶೆಟ್ಟಿ, ತಾಲೂಕು ಯುವಜನ ಕ್ರೀಡಾಧಿಕಾರಿ ಪ್ರಭಾಕರ್ ಎಸ್, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಉಪಾಧ್ಯಕ್ಷ ಗುರುರಾಜ್ ಬಿಲ್ಲವ, ಸಿ ಆರ್ ಪಿ ಗಣೇಶ್ ಪೂಜಾರಿ ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಾಂಶುಪಾಲರಾದ ಡಾ. ರವಿದಾಸ್ ಶೆಟ್ಟಿ ಸ್ವಾಗತಿಸಿದರು, ಶಿಕ್ಷಕಿ ದೇವಕಿ ನಾಯ್ಕ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.