ಧಾರ್ಮಿಕ
ಬೈಂದೂರು ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ನಾಗಬನದಲ್ಲಿ ಪೂಜೆ

Views: 1
ಬೈಂದೂರಿನ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ನಾಗ ಬನದಲ್ಲಿ ನಾಗರ ಪಂಚಮಿ ಹಬ್ಬದ ಪೂಜೆಯನ್ನು ಅದ್ದೂರಿಯಾಗಿ ನೆರವೇರಿಸಲಾಯಿತು. ಅರ್ಚಕರಾದ ರಾಜು ಭಟ್ಟರು ನಾಗದೇವರಿಗೆ ವಿಶೇಷ ಅಲಂಕಾರದೊಂದಿಗೆ ಪೂಜೆ ನೆರವೇರಿಸಿದರು.

ದೇವಸ್ಥಾನದ ಆಡಳಿತ ಮಂಡಳಿಯ ಮುಖ್ಯಸ್ಥರಾದ ಸುದರ್ಶನ ಗಾಣಿಗ, ಸದಸ್ಯರಾದ.ರಾಜಶೇಖರ್ ಬೈಂದೂರು, ಮಂಜುನಾಥ ಗಾಣಿಗ, ಪ್ರಸನ್ನ ದೇವಾಡಿಗ. ಬೈಂದೂರು ಮತ್ತು ಭಕ್ತರು ಉಪಸ್ಥಿತರಿದ್ದರು.






