ಕರಾವಳಿ

ಬೈಂದೂರು :ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಉಪ ವಲಯ ಅರಣ್ಯಾಧಿಕಾರಿ 

Views: 181

ಬೈಂದೂರು :ಖಾಸಗಿ ಸ್ಥಳದಲ್ಲಿದ್ದ ಹಲಸಿನ ಮರ ಕಡಿಯಲು ಅನುಮತಿಗಾಗಿ ಲಂಚದ ಬೇಡಿಕೆಯಿಟ್ಟ ಬೈಂದೂರು ಉಪ ವಲಯ ಅರಣ್ಯಾಧಿಕಾರಿ  ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ ಅರಣ್ಯ ವೀಕ್ಷಕ ವಿನಾಯಕ ತಲೆಮರೆಸಿಕೊಂಡಿದ್ದಾರೆ.

ಬೈಂದೂರು ತಾಲೂಕಿನ ಶಿರೂರು ನಿವಾಸಿ ಮಹಮ್ಮದ್‌ ಅನ್ವರ್‌ ಹಸನ್‌ ಅವರ ಪಟ್ಟಾ ಸ್ಥಳದಲ್ಲಿದ್ದ ಹಲಸಿನ ಮರವನ್ನು ತೆರವುಗೊಳಿಸಲು ಅರಣ್ಯ ಇಲಾಖೆಯಿಂದ ಅನುಮತಿ ನೀಡುವ ಬಗ್ಗೆ ಆರೋಪಿಗಳಿಗೆ ಅರ್ಜಿ ನೀಡಿದ್ದರು.

ಪರವಾನಿಗೆ ನೀಡಲು 4 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಬಗ್ಗೆ ಮಹಮ್ಮದ್‌ ಅನ್ವರ್‌ ಹಸನ್‌ ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ದೂರಿನ ಆಧಾರದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಹಣ ಸಮೇತ ಬಂಗಾರಪ್ಪನನ್ನು ಬಂಧಿಸಿದ್ದಾರೆ.

ಮಂಗಳೂರು ವಿಭಾಗ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ನಟರಾಜ್ ಎಂ.ಎ ಮಾರ್ಗದರ್ಶನದಲ್ಲಿ ಉಡುಪಿ ಲೋಕಾಯುಕ್ತ ಡಿವೈಎಸ್ಪಿ ಪ್ರಕಾಶ್ ಕೆ. ಸಿ ಹಾಗೂ ಕರ್ನಾಟಕ ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಮಂಜುನಾಥ್ ಇವರ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಿದ್ದಾರೆ.

Related Articles

Back to top button
error: Content is protected !!