ಜನಮನ

ಬೈಂದೂರು ದೋಣಿ ದುರಂತ: ಇಬ್ಬರ ಶವ ಪತ್ತೆ 

Views: 2

ಬೈಂದೂರು: ಶಿರೂರು ಅಳ್ವೆಗದ್ದೆ ಎಂಬಲ್ಲಿ ಆ.27ರಂದು ಸಂಜೆ ವೇಳೆ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ದೋಣಿಯಿಂದ ನೀರಿಗೆ ಬಿದ್ದು ನಾಪತ್ತೆಯಾಗಿದ್ದ ಇಬ್ಬರು ಮೀನುಗಾರರ ಮೃತದೇಹವು ಇಂದು ಪತ್ತೆಯಾಗಿದೆ.

ದೋಣಿ ಮಗುಚಿ ಬಿದ್ದ 300 ಮೀಟರ್ ವ್ಯಾಪ್ತಿಯಲ್ಲಿ ಗಂಗೊಳ್ಳಿ ಮುಸ್ತಾಫಾ ಅವರ ಮಗ ಮುಹಮ್ಮದ್ ಮುಸಾಬ್(22) ಅವರ ಮೃತದೇಹವು ನಸುಕಿನ ವೇಳೆ 1.30ಕ್ಕೆ ಮತ್ತು ಬಾವು ನೂರುಲ್ ಅಮೀನ್ ಅವರ ಮಗ ನಝಾನ್ (24) ಅವರ ಮೃತದೇಹವು ನಸುಕಿನ ವೇಳೆ 2.45ರ ಸುಮಾರಿಗೆ ದೊರೆತಿದೆ.

ಇವರು ಅಲ್ಲಿ ಮುಹಮ್ಮದ್ ಯಾಸೀನ್, ಸಾರಾಂಗ್ ಮುಸ್ತಾಕ್ ಎಂಬವ ರೊಂದಿಗೆ ಕೈರಂಪಣಿ ಬಲೆಯನ್ನು ಹಾಕಿ ಮೀನುಗಾರಿಕೆ ಮಾಡಲು ಶಿರೂರು ಗ್ರಾಮದ ಅಳಿವೆಗದ್ದೆ ಕಿರು ಬಂದರಿಗೆ ತೆರಳಿದ್ದು, ಅಲ್ಲಿ ಮುಸಾಬ್ ಹಾಗೂ ನಝಾನ್, ಕುರ್ಡಿ ಸಾಧಿಕ್ ಎಂಬವರ ಸೈಫಾ ಎಂಬ ದೋಣಿಯಲ್ಲಿ ಬಲೆಯನ್ನು ಬಿಡುತ್ತಾ ತೀರದಿಂದ ಸುಮಾರು 100 ಮೀಟರ್ ದೂರ ಹೋಗಿದ್ದರು. ಬಲೆಯನ್ನು ಬಿಡುತ್ತಿರುವಾಗ ದೋಣಿಯು ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಮಗುಚಿ ಬಿದ್ದಿದೆ.

Related Articles

Back to top button
error: Content is protected !!