ಇತರೆ

ಬೆಳಗಿನ ಜಾವ ರೈಲಿಗೆ ತಲೆ ಕೊಟ್ಟು ಅಣ್ಣ, ತಂಗಿ  ಸಾವು

Views: 186

ಚಿಕ್ಕಬಳ್ಳಾಪುರ: ರೈಲಿಗೆ ತಲೆ ಕೊಟ್ಟು ಅಣ್ಣ, ತಂಗಿ  ಸಾವನ್ನಪ್ಪಿರುವ ದಾರುಣ ಘಟನೆ ಶಿಡ್ಲಘಟ್ಟ ನಗರದಲ್ಲಿ ನಡೆದಿದೆ.

ರೈಲ್ವೆ ಹಳಿ ಮೇಲೆ ಅಣ್ಣ, ತಂಗಿಯ ರುಂಡ ಬೇರೆ, ಬೇರೆಯಾಗಿರುವ ಶವ ಪತ್ತೆಯಾಗಿದೆ.

ಪ್ರಭು (25) ಹಾಗೂ ನವ್ಯ (23) ಮೃತ ಅಣ್ಣ, ತಂಗಿಯರು. ಮೃತರನ್ನು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದ ಪ್ರೇಮನಗರ ನಿವಾಸಿಗಳು ಎಂದು ಗುರುತಿಸಲಾಗಿದೆ.

ಇತ್ತೀಚೆಗೆ ಪ್ರಭು ಹಾಗೂ ನವ್ಯ ಅವರ ತಾಯಿ ತೀರಿಕೊಂಡಿದ್ದರು. ಮಾನಸಿಕವಾಗಿ ಮನನೊಂದ ಅಣ್ಣ, ತಂಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ರೈಲ್ವೆ ಹೊರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

Back to top button
error: Content is protected !!