ಜನಮನ
ಬೆಳಗಾವಿ ಕಪಿಲೇಶ್ವರ ಹೊಂಡದಲ್ಲಿ ಜೋಡಿ ಶವ ಪತ್ತೆ

Views: 0
ಬೆಳಗಾವಿ ಸಮೀಪ ಕಪಿಲೇಶ್ವರ ಹತ್ತಿರ ಇರುವ ಹೊಂಡದಲ್ಲಿ ಪುರುಷ ಮತ್ತು ಮಹಿಳೆ ಶವ ಪತ್ತೆಯಾಗಿದೆ.
ನೀರಿನಲ್ಲಿ ತೇಲುತ್ತಿರುವ ಶವಗಳನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತ ದೇಹವನ್ನು ಮೇಲಕ್ಕೆ ಎತ್ತಿ ಮರಣೋತ್ತರ ಪರೀಕ್ಷೆಗಾಗಿ ಸಾಗಿಸಿದರು.
ಹಿಂದಿನ ರಾತ್ರಿ ಇಬ್ಬರೂ ಹೊಂಡದಲ್ಲಿ ಬಿದ್ದಿರುವ ಸಾಧ್ಯತೆ ಇದೆ. ಸಾವು ಹೇಗಾಯಿತು.ಹಾಗೂ ಕಾರಣಗಳೇನು ತಿಳಿದು ಬಂದಿಲ್ಲ. ಪ್ರಕರಣ ಖಡಿಬಜಾರ್ ಠಾಣೆಯಲ್ಲಿ ದಾಖಲಾಗಿದೆ.






