ಜನಮನ

ಬೆಂಗಳೂರು:ಮತದಾನದ ದಿನದಂದು ಸಂಬಳ ಸಹಿತ ರಜೆ ನೀಡಲು ಐಟಿ ಕಂಪನಿಗಳ ಒಪ್ಪಿಗೆ

Views: 46

ಬೆಂಗಳೂರು: ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ ಏಪ್ರಿಲ್‌ 26ರಂದು ನಡೆಯಲಿದೆ. ಈ ದಿನ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕಿದೆ. ಇನ್ನು ಐಟಿ – ಬಿಟಿ ಮಂದಿ ಮತದಾನದ ವೇಳೆ ಹಿಂದೇಟು ಹಾಕಬಾರದು. ಎಲ್ಲರೂ ಮತ ಚಲಾವಣೆ ಮಾಡಬೇಕು ಎಂಬ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಅಂದು ಕಡ್ಡಾಯವಾಗಿ ರಜೆ ನೀಡಬೇಕು ಎಂದು ಬಿಬಿಎಂಪಿ ಆಯುಕ್ತ, ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ತುಷಾರ್‌ ಗಿರಿನಾಥ್‌ ಆದೇಶವನ್ನು ಹೊರಡಿಸಿದ್ದಾರೆ. ಅಲ್ಲದೆ, ಮತದಾನದ ದಿನದಂದು ಸಂಬಳ ಸಹಿತ ರಜೆ ನೀಡಲು ಐಟಿ ಕಂಪನಿಗಳು ಸಹ ಒಪ್ಪಿಗೆ ನೀಡಿವೆ.

ಮತದಾನ ಸಂಬಂಧ ಐಟಿಬಿಟಿ ಕಂಪನಿಗಳಿಗೆ ಬಿಬಿಎಂಪಿಯಿಂದ ಆದೇಶವನ್ನು ರವಾನೆ ಮಾಡಲಾಗಿದೆ. ಮತದಾನದ ದಿನ ಕಂಪನಿಗಳು ಕಡ್ಡಾಯವಾಗಿ ರಜೆ ನೀಡಬೇಕು. ಸಿಬ್ಬಂದಿ ಮತದಾನ ಮಾಡುವ ಸಂಬಂಧ ರಜೆಯನ್ನು ಕೊಡಬೇಕು. ಈಗಾಗಲೇ ರಾಜ್ಯ ಸರ್ಕಾರ ಕೂಡ ರಜೆಯನ್ನು ಘೋಷಣೆ ಮಾಡಿದೆ. ಅಲ್ಲದೆ, ಈ ಸಂಬಂಧ ಬಿಬಿಎಂಪಿಯಿಂದ ಔಟರ್ ರಿಂಗ್‌ರೋಡ್ ಅಸೋಸಿಯೇಷನ್‌ಗೆ ಪತ್ರವೂ ರವಾನೆಯಾಗಿದೆ.

ಇನ್ನು ಮತದಾನ ಹೆಚ್ಚಳ ಸಂಬಂಧ ಐಟಿ ಬಿಟಿ ಕಂಪನಿಗಳ ಜತೆಗೆ ಬಿಬಿಎಂಪಿ ಇಂದು (ಮಂಗಳವಾರ) ಸಭೆ ನಡೆಸಲಾಗಿದೆ. ಸಭೆ ಮಾಡಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ. ಅಲ್ಲದೆ, ತಮ್ಮ ತಮ್ಮ ನೌಕರರು ತಪ್ಪದೇ ಮತದಾನ ಮಾಡಲು ಯಾವ ರೀತಿ ಪ್ರೋತ್ಸಾಹವನ್ನು ನೀಡಬಹುದು ಎಂಬ ಬಗ್ಗೆಯೂ ಚರ್ಚೆಗಳು ನಡೆಯಿತು.

ಒಪ್ಪಿದ ಐಟಿ ಬಿಟಿ ಕಂಪನಿಗಳು ಮತದಾನದ ದಿನದಂದು ಸಂಬಳ ಸಹಿತ ರಜೆ ನೀಡಲು ಐಟಿ ಕಂಪನಿಗಳು ಸಹ ಒಪ್ಪಿಗೆ ನೀಡಿವೆ. ಬಿಬಿಎಂಪಿ ಜತೆ ನಡೆದ ಸಭೆಯಲ್ಲಿ ಪೇಡ್ ಲೀವ್‌ಗೆ ಒಪ್ಪಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ 5 ಸಾವಿರಕ್ಕೂ ಅಧಿಕ ಐಟಿ ಬಿಟಿ ಕಂಪನಿಗಳು ಬಿಬಿಎಂಪಿ ಮನವಿಗೆ ಸ್ಪಂದಿಸಿವೆ.

Related Articles

Back to top button
error: Content is protected !!