ಸಾಂಸ್ಕೃತಿಕ

ಬೆಂಗಳೂರಿನ ಹುಡುಗಿಯೊಂದಿಗೆ ಅಮಿರ್‌ ಖಾನ್‌ 3ನೇ ಮದುವೆಗೆ ಸಿದ್ಧತೆ 

Views: 14

ಕನ್ನಡ ಕರಾವಳಿ ಸುದ್ದಿ: ಕಳೆದ ವರ್ಷ ಆಮಿರ್ ಖಾನ್‌ 60 ನೇ ವಯಸ್ಸಿನಲ್ಲಿ ಮತ್ತೆ ಪ್ರೀತಿಯನ್ನು ಕಂಡುಕೊಳ್ಳುವ ಬಗ್ಗೆ ಮಾತನಾಡಿದ್ದರು. ಈಗ ನಟ ಅಮಿರ್‌ ಖಾನ್‌ ಮೂರನೇ ಮದುವೆ ಆಗಲಿದ್ದಾರೆ.

ನಟ ಆಮಿರ್ ಖಾನ್ ತಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಲು ಸಜ್ಜಾಗಿದ್ದಾರೆ. ಜುಲೈ 5 ರಂದು ಖಾಸಗಿ ಸಮಾರಂಭದಲ್ಲಿ ನಟ ಗೌರಿ ಸ್ಪ್ರಾಟ್ ಅವರನ್ನು ವಿವಾಹವಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಟ ಆಮಿರ್ ಖಾನ್ 61 ನೇ ವಯಸ್ಸಿನಲ್ಲಿ ಮೂರನೇ ಮದುವೆಗೆ ಸಕಲ ಸಿದ್ಧತೆ ನಡೆದಿದೆ ಎನ್ನಲಾಗುತ್ತಿದೆ.

ಆಮೀರ್ ಖಾನ್‌ 1986 ರಲ್ಲಿ ತಮ್ಮ ಬಾಲ್ಯದ ಪ್ರಿಯತಮೆ ರೀನಾ ದತ್ತಾ ಅವರನ್ನು ವಿವಾಹವಾದರು. ಅವರಿಗೆ ಜುನೈದ್ ಎಂಬ ಮಗ ಮತ್ತು ಇರಾ ಎಂಬ ಮಗಳು ಇದ್ದಾರೆ. ಜುನೈದ್ ಚಿತ್ರರಂಗವನ್ನು ಪ್ರವೇಶಿಸಿದ್ದಾರೆ, ಆದರೆ ಇರಾ ವಕೀಲರಾಗಿದ್ದಾರೆ. 16 ವರ್ಷಗಳ ದಾಂಪತ್ಯದ ನಂತರ ರೀನಾ ದತ್ತಾ ಮತ್ತು ಆಮಿರ್‌ ಖಾನ್ 2002ರಲ್ಲಿ ವಿಚ್ಛೇದನ ಪಡೆದರು.

ಆಮಿರ್ 2005 ರಲ್ಲಿ ಕಿರಣ್ ರಾವ್ ಅವರನ್ನು ವಿವಾಹವಾದರು. 2001 ರ‌ ಲಗಾನ್ ಚಿತ್ರದ ಸೆಟ್‌ಗಳಲ್ಲಿ ಇಬ್ಬರೂ ಭೇಟಿಯಾದರು. ಅಲ್ಲಿ ಕಿರಣ್ ರಾವ್ ಸಹಾಯಕ ನಿರ್ದೇಶಕಿಯಾಗಿ ಸೇವೆ ಸಲ್ಲಿಸಿದರು. ಅವರು 2021 ರಲ್ಲಿ ವಿಚ್ಛೇದನ ಪಡೆದರು. ಈ ದಂಪತಿಗೆ ಬಾಡಿಗೆ ತಾಯ್ತನದ ಮೂಲಕ ಮಗ ಆಜಾದ್ ಜನಿಸಿದ್ದಾನೆ.

ಬಾಲಿವುಡ್‌ ನಟ ಆಮಿರ್ ಖಾನ್ ಮತ್ತೆ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ. ಆಮಿರ್‌ ಖಾನ್‌ ಬಹುಕಾಲದ ಗೆಳತಿ ಗೌರಿ ಸ್ಪ್ರ್ಯಾಟ್ ಅವರೊಂದಿಗೆ ಜುಲೈ 5ರಂದು ಸರಳವಾಗಿ ಮದುವೆ ಆಗಲಿದ್ದಾರೆ ಎಂದು ವರದಿಯಾಗಿದೆ. ಕಳೆದ ವರ್ಷ ತಮ್ಮ 60ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಆಮಿರ್ ಖಾನ್ ಅವರು ಗೌರಿ ಸ್ಪ್ರ್ಯಾಟ್ ಜೊತೆಗಿನ ಪ್ರೀತಿಯನ್ನು ಅಧಿಕೃತವಾಗಿ ಮಾಧ್ಯಮಗಳ ಮುಂದೆ ಒಪ್ಪಿಕೊಂಡಿದ್ದರು. ಅದಕ್ಕೂ ಒಂದು ವರ್ಷದ ಮೊದಲಿನಿಂದಲೇ ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದರು ಎಂಬ ವದಂತಿ ಇತ್ತು.

ಆಮಿರ್ ಖಾನ್ ಮತ್ತು ಗೌರಿ ಸ್ಪ್ರಾಟ್ ಅವರ ಸಂಬಂಧದ ಬಗ್ಗೆ ಹಲವು ಊಹಾಪೋಹಗಳು ಕೇಳಿಬರುತ್ತಿದ್ದವು. ಇದೀಗ ಆ ಸಂಬಂಧಕ್ಕೆ ಕಾನೂನುಬದ್ಧ ಮಾನ್ಯತೆ ನೀಡಲು ಇಬ್ಬರೂ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಈ ಬೆಳವಣಿಗೆ ಬಾಲಿವುಡ್ ಅಭಿಮಾನಿಗಳಲ್ಲಿ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಗೌರಿ ಸ್ಪ್ರಾಟ್ ಯಾರು?

ಗೌರಿ ಸ್ಪ್ರಾಟ್ ಅವರು ಮೂಲತಃ ಬೆಂಗಳೂರಿನವರು ಮತ್ತು ತಮ್ಮ ಜೀವನದ ಬಹುಪಾಲು ಕಾಲವನ್ನು ಈ ನಗರದಲ್ಲಿ ಕಳೆದಿದ್ದಾರೆ. ಅವರು ಬೆಂಗಳೂರಿನಲ್ಲಿ ಸಲೂನ್ ಹೊಂದಿದ್ದ ರೀಟಾ ಸ್ಪ್ರಾಟ್ ಅವರ ಮಗಳು.

ಗೌರಿ ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಗೌರಿ ಬ್ಲೂ ಮೌಂಟೇನ್ ಶಾಲೆಯಲ್ಲಿ ಓದಿದ್ದು, 2004 ರಲ್ಲಿ ಲಂಡನ್ ವಿಶ್ವವಿದ್ಯಾಲಯದಲ್ಲಿ ಆರ್ಟ್ಸ್‌ನಲ್ಲಿ ಫ್ಯಾಷನ್ ಕೋರ್ಸ್, ಎಫ್‌ಡಿಎ ಸ್ಟೈಲಿಂಗ್ ಮತ್ತು ಫೋಟೋಗ್ರಫಿಯನ್ನು ಪೂರ್ಣಗೊಳಿಸಿದ್ದಾರೆ. ಪ್ರೊಫೈಲ್ ಪ್ರಕಾರ, ಅವರು ಪ್ರಸ್ತುತ ಮುಂಬೈನಲ್ಲಿ ಬಿಬ್ಲಂಟ್ ಸಲೂನ್ ಅನ್ನು ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Related Articles

Back to top button
error: Content is protected !!