ಇತರೆ

ಬೆಂಗಳೂರಿನಲ್ಲಿ ಮಹಿಳೆಯ ಬರ್ಬರ ಕೊಲೆ 30 ಪೀಸ್‌ ಮಾಡಿದ್ದ ಯುವತಿ ದೇಹ ಫ್ರಿಜ್‌ನಲ್ಲಿ ಪತ್ತೆ!

Views: 359

ಬೆಂಗಳೂರು: ಪೀಸ್‌, ಪೀಸ್ ಮಾಡಿ ಯುವತಿ ಮೃತದೇಹವನ್ನು ಫ್ರಿಜ್‌ನಲ್ಲಿ ಇಟ್ಟಿದ್ದ ದೆಹಲಿ ಶ್ರದ್ಧಾ ಕೇಸ್‌ ಮಾದರಿಯ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಸದ್ಯದ ಮಾಹಿತಿಗಳ ಪ್ರಕಾರ ಯುವತಿಯ ಪ್ರಾಣ ತೆಗೆದು ಬಳಿಕ ದೇಹವನ್ನು ತುಂಡು ತುಂಡಾಗಿ ಕತ್ತರಿಸಲಾಗಿದೆ. ಸುಮಾರು 30 ಪೀಸ್‌ ಮಾಡಿ ಫ್ರಿಡ್ಜ್‌ನಲ್ಲಿಡಲಾಗಿದೆ. ಮೃತ ಮಹಿಳೆಯನ್ನು ಖಾಸಗಿ ಮಾಲ್‌ನಲ್ಲಿ ಕೆಲಸ ಮಾಡ್ತಿದ್ದ ಮಹಾಲಕ್ಷ್ಮೀ(29) ಎಂದು ಗುರುತಿಸಲಾಗಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ ಇದು ಸಂಭವಿಸಿ ನಾಲ್ಕೈದು ದಿನಗಳು ಆಗಿರಬಹುದು. ಕೊಲೆಯಾಗಿರುವ ಮಹಿಳೆಯ ಗುರುತು ಪತ್ತೆಯಾಗಿದೆ. ಹೊರರಾಜ್ಯದವರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದರು. ಡಾಗ್ ಸ್ಕ್ವಾಡ್, ಬೆರಳಚ್ಚು ತಜ್ಞರ ತಂಡ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಎಫ್ಎಸ್ಎಲ್ ತಂಡ ಕೂಡ ಆಗಮಿಸುತ್ತಿದೆ. ತನಿಖೆ ಬಳಿಕ ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಲಿದೆ.

ಮಹಿಳೆ ಇತ್ತೀಚೆಗಷ್ಟೇ ವೈಯಾಲಿಕಾವಲ್ನ ಮನೆಗೆ ಬಂದಿದ್ದಳು. ಇಂದು ಬೆಳಗ್ಗೆ ಆಕೆಯ ತಾಯಿ-ಸಹೋದರಿ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಬೆಳಗ್ಗೆ 9;30ಕ್ಕೆ ಹೊರಗೆ ಹೋದರೆ ರಾತ್ರಿ 10:30ಕ್ಕೆ ಮನೆಗೆ ವಾಪಸ್ ಬರುತ್ತಿದ್ದಳು. ಇವತ್ತು ಆಕೆಯ ತಾಯಿ ಮತ್ತು ಅಕ್ಕ ಬಂದಿದ್ದರು. ಮನೆಯಿಂದ ಏನೋ ವಾಸನೆ ಬರುತ್ತಿದೆ ಎಂದು ಫ್ರಿಡ್ಜ್ ತೆರೆದಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಕಳೆದ ಎರಡು ದಿನಗಳಿಂದ ಈ ಮನೆಯಿಂದ ವಾಸನೆ ಬರುತ್ತಾ ಇತ್ತಂತೆ. ಅದೇ ಬಿಲ್ಡಿಂಗ್‌ನ ಅಕ್ಕಪಕ್ಕದವರು ಇವತ್ತು ಸಂಬಂಧಿಕರಿಗೆ ಹೇಳಿದ್ದಾರೆ. ಮನೆ ಬೀಗ ತೆಗೆದ ಸಂದರ್ಭದಲ್ಲಿ  ಭಯಾನಕ ದೃಶ್ಯ ನೋಡಿದ ಸಂಬಂಧಿಕರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

 

Related Articles

Back to top button
error: Content is protected !!