ಕರಾವಳಿ
ಬೀಜಾಡಿ: ಇನ್ನೂ ಪತ್ತೆಯಾಗದ ಸಮುದ್ರ ಪಾಲಾದ ತಿಪಟೂರಿನ ಯುವಕನ ಮೃತದೇಹ

Views: 80
ಕೋಟೇಶ್ವರ : ತಿಪಟೂರಿನಿಂದ ಮದುವೆಗೆಂದು ಬೀಜಾಡಿಗೆ ಬಂದ ಯುವಕ ಸಮುದ್ರಕ್ಕೆ ಇಳಿದು ಅಲೆಗಳ ಹೊಡೆತಕ್ಕೆ ಕೊಚ್ಚಿ ಹೋದ ಯುವಕನಿಗಾಗಿ ಗುರುವಾರವಿಡೀ ಹುಡುಕಿದರೂ ಯಾವುದೇ ಸುಳಿವು ಸಿಕ್ಕಿಲ್ಲ
ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಯೋಗೀಶ್( 23) ಬುಧವಾರ ಸಂಜೆ ಸಮುದ್ರ ವಿಹಾರಕ್ಕೆ ಬಂದಿದ್ದಾಗ ಬೀಚಿನಲ್ಲಿ ಅಲೆಗಳ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ.ಜೊತೆಗಿದ್ದ ಸಂದೀಪ್( 24) ಎಂಬುವರನ್ನು ರಕ್ಷಿಸಲಾಗಿದ್ದು,
ಗುರುವಾರ ಬೆಳಿಗ್ಗೆ ಯೋಗಿಶ್ ಅವರ ತಂದೆ ಸಹೋದರ ಹಾಗೂ ಸಂಬಂಧಿಕರು ಕುಂದಾಪುರಕ್ಕೆ ಬಂದಿದ್ದು, ಅವರೊಂದಿಗೆ ಸ್ಥಳಕ್ಕೆ ತೆರಳಿದ ಕುಂದಾಪುರ ಪೊಲೀಸರ ನೇತೃತ್ವದಲ್ಲಿ ಮೃತದೇಹಕ್ಕಾಗಿ ಹುಡುಕಾಡಿದರೂ ಯಾವುದೇ ಸುಳಿವು ಸಿಕ್ಕಿಲ್ಲ ಕಡಲ ಅಲೆಗಳ ಅಬ್ಬರ ಜಾಸ್ತಿಯಾಗಿದ್ದರಿಂದ ಸಮುದ್ರಕ್ಕೆ ಇಳಿದು ಬೋಟುಗಳ ಮೂಲಕ ಹುಡುಕಾಟ ನಡೆಸುವುದು ಕಷ್ಟ ಸಾಧ್ಯ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.






