ಬಿಗ್‌ಬಾಸ್ ಮನೆಯಲ್ಲಿ ಚೈತ್ರಾ ವಿರುದ್ಧ ಸಿಡಿದೆದ್ದ ಅಶ್ವಿನಿ ಗೌಡ!
Views: 185
ಕನ್ನಡ ಕರಾವಳಿ ಸುದ್ದಿ: ಬಿಗ್‌ಬಾಸ್ ಮನೆಗೆ ರಜತ್, ಮಂಜು, ಚೈತ್ರಾ, ಮೋಕ್ಷಿತಾ ಹಾಗೂ ತ್ರಿವಿಕ್ರಮ್ ಅವರು ಅತಿಥಿಗಳಾಗಿ ಆಗಮಿಸಿದ್ದಾರೆ. ಈ ಮೊದಲೇ ಬಿಗ್ ಬಾಸ್ ನೀಡಿರುವ ಆದೇಶದಂತೆ ಗೆಸ್ಟ್‌ಗಳು ಹೇಳಿದಂತೆ ಸ್ಪರ್ದಿಗಳು ಸತ್ಕಾರ ಮಾಡಬೇಕು.
ಈ ವಿಚಾರದಲ್ಲಿ ಗಿಲ್ಲಿ ಅವರು ಅತಿಥಿಗಳನ್ನು ಎದುರು ಹಾಕಿಕೊಂಡು ಟಕ್ಕರ್ ಕೊಟ್ಟಿದ್ದಲ್ಲದೇ, ಮಂಜು – ರಜತ್ ಅವರ ಕಾಲೆಳೆದು ಮಾತನಾಡಿದ್ದಾರೆ. ಆದರೆ ಗಿಲ್ಲಿ ಪ್ರತಿ ಮಾತಿಗೂ ಅವರದ್ದೇ ಶೈಲಿಯಲ್ಲಿ ಟಾಂಗ್ ಕೊಟ್ಟಿದ್ದಾರೆ.
ಎರಡನೇಯ ದಿನ ಅತಿಥಿಯಾದ ಚೈತ್ರಾ ಅವರು ಮನೆಯಲ್ಲಿದ್ದ ಗೊಂಬೆಯ ಹೆಸರನ್ನು ಕಾವ್ಯ ಬಳಿ ಕೇಳಿದ್ದಾರೆ. ಅದಕ್ಕೆ ಕಾವ್ಯ ಸರಿಯಾದ ಉತ್ತರ ನೀಡಿಲ್ಲ. ಇದರಿಂದ ಕೋಪಗೊಂಡ ಚೈತ್ರಾ, ನಿಮ್ಮ ತಲೆಯಲ್ಲಿ ಬುದ್ದಿಯಿಲ್ಲ ಎಂದು ಎಲ್ಲರೂ ಎದುರು ನಿಂತು ಹೇಳಬೇಕು.ಇಲ್ಲದಿದ್ರೆ ನಾನು ತಿಂಡಿ ತಿನ್ನಲ್ಲ ಎಂದಿದ್ದಾರೆ.
ಬಳಿಕ ಕಾವ್ಯ, ಗಿಲ್ಲಿ, ಧನುಷ್ ಅವರು ಚೈತ್ರಾ ಮುಂದೆ ನಿಂತು ತಲೆಯಲ್ಲಿ ಬುದ್ದಿಯಿಲ್ಲ ಎಂದಿದ್ದಾರೆ. ಕ್ಯಾಪ್ಟನ್ ಅಭೀಷೇಕ್ ಎಲ್ಲರನ್ನು ಕರೆದು, ಚೈತ್ರಾ ಅವರ ಮುಂದೆ ಹಾಗೆಯೇ ಹೇಳಬೇಕು ಎಂದಿದ್ದಾರೆ.ಆದರೆ ಇದಕ್ಕೆ ಅಶ್ವಿನಿ ಗೌಡ ವಿರೋಧ ವ್ಯಕ್ತಪಡಿಸಿದ್ದಾರೆ.
ಬುದ್ದಿಯಿಲ್ಲ ಎನ್ನುವ ಪದ ಬಳಕೆಯನ್ನು ನಾನು ಮಾಡೋದಕ್ಕೆ ಆಗಲ್ಲ. ಅತಿಥಿ ಎನ್ನುವ ಮಾತ್ರಕ್ಕೆ ಕ್ಷಮೆ ಕೇಳಬೇಕಂತಿಲ್ಲ. ನಿಮಗೆ ಬುದ್ದಿಯಿಲ್ಲದೆ ಇರಬಹುದು ಅದಕ್ಕೆ ಎಲ್ಲರನ್ನು ಒಪ್ಪಿಸ್ತೀನಿ ಅಂತ ಹೇಳ್ಕೊಂಡು ಬಂದಿದ್ದೀರಿ. ನಾನು ಹಾಗೆ ಮಾಡಲ್ಲ. ನಿಮಗೆ ಬುದ್ಧಿಯಿಲ್ಲ ಅಂತ ನೀವು ಒಪ್ಪಿಕೊಳ್ಳಿ, ನಾನ್ಯಾಕೆ ಒಪ್ಪಿಕೊಳ್ಳಬೇಕು ಎಂದು ಅಶ್ವಿನಿ ಗೌಡ ಚೈತ್ರಾ ಅವರಿಗೆ ಹೇಳಿದ್ದಾರೆ.






