ಇತರೆ

ಬಾರ್ಕೂರು ಕಚ್ಚೂರಿನಲ್ಲಿ ತನ್ನ ಮರ್ಮಾಂಗವನ್ನೇ ಕೊಯ್ದು ಕೊಂಡ ವ್ಯಕ್ತಿ ಸಾವು 

Views: 237

ಕನ್ನಡ ಕರಾವಳಿ ಸುದ್ದಿ: ಬಾರಕೂರು ಕಚ್ಚೂರಿನಲ್ಲಿ ಕುಡಿದ ಮತ್ತಿನಲ್ಲಿ ತನ್ನ ಮರ್ಮಾಂಗವನ್ನು ತಾನೇ ಕೊಯ್ದು ಕೊಂಡ ವ್ಯಕ್ತಿ ಸಾವನ್ನಪ್ಪಿದ ಘಟನೆ ನಡೆದಿದೆ.

ಕಚ್ಚೂರಿನ ಸಂತೋಷ್(42) ಮೃತಪಟ್ಟವರು.

ಸಂತೋಷ್ ಅವರು ಸರಿಯಾಗಿ ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇದ್ದು, ವಿಪರೀತ ಮದ್ಯಪಾನ ಮಾಡುತ್ತಿದ್ದರು.ಮಾನಸಿಕ ಖನ್ನತೆಯಿಂದ ಬಳಲುತ್ತಿದ್ದರು.ಕಳೆವು ದಿನಗಳಿಂದ ಮದ್ಯಪಾನ ಮಾಡಿಕೊಂಡು ಬಂದು, ತಾನು ಸಾಯುತ್ತೇನೆ, ಬದುಕುವುದಿಲ್ಲವೆಂದು ಹೇಳುತ್ತಿದ್ದರು.

ರವಿವಾರ ಮನೆಯ ಬಾತ್ ರೂಮಿನಲ್ಲಿ  ಅಂಗಾತ ಬಿದ್ದುಕೊಂಡಿದ್ದು, ಮರ್ಮಾಂಗದಿಂದ ರಕ್ತ ಸುರಿಯುತ್ತಿತ್ತು. ಕೂಡಲೇ ಚಿಕಿತ್ಸೆಗೆ ಬ್ರಹ್ಮಾವರದ ಸರಕಾರಿ ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರೀಕ್ಷಿಸಿ ಸಂತೋಷ ಅವರು ಮೃತಪಟ್ಟಿರುವುದಾಗಿ ತಿಳಿಸಿದರು.ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!