ಆರೋಗ್ಯ

ಬಾಟಲಿ ನೀರು ಅಪಾಯಕಾರಿ, ಆಹಾರ ಇಲಾಖೆ ಶಾಕಿಂಗ್ ಮಾಹಿತಿ

Views: 79

ಕನ್ನಡ ಕರಾವಳಿ ಸುದ್ದಿ: ವಾಟರ್ ಬಾಟಲ್ ನಲ್ಲಿರುವ ನೀರು ಆರೋಗ್ಯಕ್ಕೆ ಹಾನಿಕಾರಕ ಎಂದು ಆಹಾರ ಇಲಾಖೆ ತಿಳಿಸಿದೆ

ಕಳಪೆ ಗುಣಮಟ್ಟದ ಆಹಾರದ ವಿರುದ್ಧ ಸಮರ ಸಾರಿದ್ದ ಆಹಾರ ಇಲಾಖೆ ಇದೀಗ ವಾಟರ್ ಬಾಟಲ್ ಬಗ್ಗೆಯೂ ಎಚ್ಚರಿಕೆ ನೀಡಿದೆ. ಕೆಲ ಕಂಪನಿಗಳ ವಾಟರ್ ಬಾಟಲ್ ನಲ್ಲಿರುವ ನೀರು ಕೂಡ ಕಡಿಮೆ ಗುಣಮಟ್ಟದಿಂದ ಕೂಡಿದ್ದು, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ತಿಳಿಸಿದೆ.

ವಾಟರ್ ಬಾಟಲ್ ಗಳಿಂದ ಪೂರೈಕೆಯಾಗುವ ನೀರು ಶೇ.50ರಷ್ಟು ಕಳಪೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಬಾಟಲ್ ನೀರಿನಲ್ಲಿ ಮಿನರಲ್ ಕೂಡ ಇರುವುದಿಲ್ಲ. ಸಾಕಷ್ಟು ಕಂಪನಿಗಳ ವಾಟರ್ ಬಾಟಲ್ ಅಸುರಕ್ಷಿತವಾಗಿವೆ ಎಂದು ತಿಳಿಸಿದೆ.

ಫೆಬ್ರವರಿಯಲ್ಲಿ ಕುಡಿಯುವ ನೀರಿನ ಬಾಟಲಿಗಳು, ಕರಿದ ಹಸುರು ಬಟಾಣಿಗಳ ಮಾದರಿಗಳನ್ನು ವಿಶ್ಲೇಷಣೆಗೆ ಒಳ ಪಡಿಸಿದ್ದು ಮಾರ್ಚ್‌ನಲ್ಲಿ ತುಪ್ಪ ಖೋವಾ, ಪನೀರ್, ಸಿಹಿತಿನಿಸು, ಖಾರ ಮಿಕ್ಟರ್‌ಗಳನ್ನೂ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ ಎಂದು ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಕುಡಿಯುವ ನೀರಿನ ಬಾಟಲ್‌ಗಳ 296 ಮಾದರಿಗಳನ್ನು ಸಂಗ್ರಹಿಸಿತ್ತು. ಅವುಗಳಲ್ಲಿ 255 ಮಾದರಿಗಳ ವಿಶ್ಲೇಷಣೆ ಪೂರ್ಣಗೊಂಡಿದ್ದು, 72 ಮಾತ್ರ ಸುರಕ್ಷಿತ ಎಂಬ ವರದಿ ಬಂದಿದೆ. ಇನ್ನುಳಿದ 95 ಅಸುರಕ್ಷಿತ ಹಾಗೂ 88 ಕಳಪೆ ಗುಣಮಟ್ಟದವು ಇವುಗಳ ಪೈಕಿ ಬಹುತೇಕ ಸ್ಥಳೀಯ ಬ್ರಾಂಡ್‌ಗಳೇ ಆಗಿದ್ದು ಕ್ಲೋರೈಡ್, ಮೆಗ್ನಿಷಿಯಂನಂತಹ ರಾಸಾಯನಿಕ ಅಂಶಗಳು ಪತ್ತೆಯಾಗಿವೆ.ಎಂದು ವರದಿಯಾಗಿದೆ.

 

Related Articles

Back to top button