ಬಹುಮುಖ ಪ್ರತಿಭೆ ಸಾನ್ವಿ ಎಸ್ ಅಂಚನ್ ಏಣಗುಡ್ಡೆ ಕಟಪಾಡಿಗೆ ಡಾ.ಶಿವರಾಮ ಕಾರಂತ ಬಾಲ ಪುರಸ್ಕಾರ ಪ್ರದಾನ
Views: 354
ಕನ್ನಡ ಕರಾವಳಿ ಸುದ್ದಿ: ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ, ಕೋಟತಟ್ಟು ಗ್ರಾಮ ಪಂಚಾಯಿತಿ, ಮಣೂರು ಗೀತಾನಂದ ಫೌಂಡೇಷನ್, ಉಸಿರು ಸಂಸ್ಥೆ, ಬಾಳ್ಕುದ್ರು ಕೈಂಡ್ ಹಾರ್ಟ್ಸ್, ಬಾರ್ಕೂರು ಮೂಡುಕೇರಿ ವೇಣುಗೋಪಾಲ ಎಜುಕೇಷನಲ್ ಸೊಸೈಟಿ, ಕೋಟತಟ್ಟು ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದ ವತಿಯಿಂದ ನ.30ರಂದು ಡಾ.ಶಿವರಾಮ ಕಾರಂತ ಥೀಂ ಪಾರ್ಕ್ನಲ್ಲಿ 5ನೇ ವರ್ಷದ ಡಾ.ಶಿವರಾಮ ಕಾರಂತ ಬಾಲ ಪುರಸ್ಕಾರವನ್ನು ಬಾಲ ಪ್ರತಿಭೆ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್ ನ 10 ನೇ ವಿದ್ಯಾರ್ಥಿನಿ ಸಾನ್ವಿ ಎಸ್ ಅಂಚನ್ ಏಣಗುಡ್ಡೆ ಕಟಪಾಡಿ ಪ್ರದಾನ ಮಾಡಲಾಯಿತು.
ಸಾನ್ವಿ ಎಸ್ ಅಂಚನ್ ನ ತಂದೆ ಸಂದೀಪ್ ಕುಮಾರ್ ಪಾರ್ಮಸಿಸ್ಟ್ ಅಧಿಕಾರಿ ಜಿಲ್ಲಾ ಆಸ್ಪತ್ರೆ ಹಾಗೂ ತಾಯಿ ಅಶ್ವಿನಿ ದೈಹಿಕ ಶಿಕ್ಷಣ ಶಿಕ್ಷಕಿ ಸರಕಾರಿ ಪದವಿ ಪೂರ್ವ ಕಾಲೇಜು ಮಲ್ಪೆ .ಸಾನ್ವಿ ಶಿಕ್ಷಣದ ಜೊತೆಗೆ ಸ್ಕೂಲ್ ಲೀಡರ್ ಮತ್ತು ಲೈಟ್ ಹೌಸ್ ಎಂಬ ಸಿನಿಮಾದಲ್ಲಿ ಅಭಿನಯಿಸಿದ್ದಾಳೆ.
ಇವಳು ವಿ- ರಾಕ್ಸ್ ಡಾನ್ಸ್ ಕಂಪೆನಿ ಉಡುಪಿ ಇಲ್ಲಿ ನೃತ್ಯ ಗುರುಗಳಾದ ಶ್ರೀಯುತ ವಸಂತ್ ಇವರಿಂದ ನೃತ್ಯವನ್ನು ಕಲಿಯುತ್ತಾ ಇದ್ದಾಳೆ .300 ಕ್ಕೂ ಅಧಿಕ ವೇದಿಕೆಯಲ್ಲಿ ನೃತ್ಯ ವನ್ನು ಮಾಡಿರುತ್ತಾಳೆ.
ಕರಾಟೆಯಲ್ಲಿ ರಾಜ್ಯ ಮತ್ತು ರಾಷ್ಟ ಮಟ್ಟದಲ್ಲಿ ಪ್ರಶಸ್ತಿಯನ್ನು ಪಡೆದಿರುತ್ತಾಳೆ.ಕರಾಟೆಯನ್ನು ಶ್ರೀಯುತ ರವಿ ಸಾಲಿಯನ್ ಇವರಿಂದ ಕಲಿಯುತ್ತಾ ಇದ್ದಾಳೆ.ಮಯೋದ ಮಹಾಶಕ್ತಿಲು ಎಂಬ ತುಳು ನಾಟಕದಲ್ಲಿ ಕೂಡ ಅಭಿನಯಿಸಿದ್ದಾಳೆ. ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನವನ್ನು ಪಡೆದಿರುತ್ತಾಳೆ.











