ಕರಾವಳಿ

ಬಸ್ಸು-ಬೈಕ್ ಢಿಕ್ಕಿ: ಪೌರಕಾರ್ಮಿಕ ಸಾವು

Views: 165

ಕುಂದಾಪುರ: ಹಂಗಳೂರು ಬಳಿ ಗುರುವಾರ ರಾತ್ರಿ ಬಸ್- ಬೈಕ್ ಢಿಕ್ಕಿಯಾಗಿ ಪುರಸಭೆ ಪೌರಕಾರ್ಮಿಕ ಸುಂದರ (39)ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬಾರಕೂರಿನ ನಿವಾಸಿಯಾಗಿರುವ ಇವರು ಕುಂದಾಪುರ ಪುರಸಭೆಯಲ್ಲಿ ಪೌರಕಾರ್ಮಿಕ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೋಟೇಶ್ವರ ಕಡೆಯಿಂದ ಬೈಕ್ ನಲ್ಲಿ ಸರ್ವಿಸ್ ರಸ್ತೆಯಲ್ಲಿ ಬರುತ್ತಿದ್ದಾಗ ಹೆದ್ದಾರಿಯಿಂದ ಖಾಸಗಿ ಬಸ್ ಡಿಪೋಗೆ ಬರುತ್ತಿದ್ದಾಗ ಢಿಕ್ಕಿಯಾಗಿದೆ.

ಮೃತರು ಕಳೆದ 15 ವರ್ಷಗಳಿಂದ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿದ್ದ ನಾಲ್ಕು ತಿಂಗಳ ಹಿಂದಷ್ಟೇ ಖಾಯಂ ನೇಮಕಾತಿ ಆದೇಶ ಪಡೆದಿದ್ದರು.

ಕುಂದಾಪುರ ಸಂಚಾರಿ ಠಾಣೆ ಪೊಲೀಸರು ತಕ್ಷಣ ಸ್ಥಳಕ್ಕಾಗಿಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

Related Articles

Back to top button
error: Content is protected !!