ಕ್ರೀಡೆ

ಬಸ್ರೂರು ಶ್ರೀ ಶಾರದ ಆಂಗ್ಲ ಮಾಧ್ಯಮ ಶಾಲೆಯಲ್ಲಿ SPPL-2k25 ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ

Views: 258

ಕನ್ನಡ ಕರಾವಳಿ ಸುದ್ದಿ: ಬಸ್ರೂರು ಶ್ರೀ ಶಾರದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಾಲಕರೊಂದಿಗೆ ಭಾಂದವ್ಯ ಬೆಸದ ಎಸ್ ಪಿ ಪಿ ಎಲ್ 2k25 : “ಆರೋಗ್ಯವಂತ ಮನಸ್ಸು ಆರೋಗ್ಯವಂತ ದೇಹ”ದಲ್ಲಿದೆ ಎಂಬ ಉಕ್ತಿಯಂತೆ ಮಕ್ಕಳಲ್ಲಿ ಕ್ರೀಡಾ ಮನೋಭಾವನೆಯನ್ನು ಹೆಚ್ಚಿಸುವ ಸದುದ್ದೇಶದಿಂದ ಶ್ರೀ ಶಾರದಾ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ ಬಸ್ರೂರು ಇಲ್ಲಿ ಪಾಲಕರು ಮತ್ತು ವಿದ್ಯಾರ್ಥಿಗಳಿಗೆ ವಿನೂತನ ರೀತಿಯ ಎರಡು ದಿನದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಯಿತು.

ಮುಖ್ಯ ಅತಿಥಿಗಳಾಗಿ ಮನೋಜ್ ನಾಯರ್ ಚಕ್ರವರ್ತಿ ಕ್ರಿಕೆಟ್ ಕ್ಲಬ್ ಕುಂದಾಪುರ, ಶ್ರೀಯುತ ಸತ್ಯನಾರಾಯಣ ಅಧ್ಯಕ್ಷರು ಬಸ್ರೂರು ಸ್ಪೋರ್ಟ್ಸ್ ಕ್ಲಬ್, ದಸ್ತಗಿರ ಕುಂದಾಪುರ ಮುಸ್ಲಿಂ ಫೆಡರೇಷನ್, ಬೇಳೂರು ದಿನಕರ್ ಶೆಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷರು ಬಸ್ರೂರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಶ್ರೀಯುತ ಸಂತೋಷ್ ಶೆಟ್ಟಿ ಅವರು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳ ನಾಡಿದ ಶಾಲಾ ಶೈಕ್ಷಣಿಕ ನಿರ್ದೇಶಕರಾದ ಪ್ರಕಾಶ್ ಶೆಟ್ಟಿ ಅವರು ಕ್ರಿಕೆಟ್ ನಡೆದು ಬಂದ ಹಾದಿಯ ಬಗೆಗೆ  ವಿವರಿಸಿದರು.

ಉದ್ಘಾಟನೆ ಮಾಡಿದ  ಶ್ರೀಯುತ ಸತ್ಯನಾರಾಯಣ ಅವರು” ಮಕ್ಕಳಿಗೆ ಓದುವುದರ ಜೊತೆಗೆ ಕ್ರೀಡೆಯ ಬಗ್ಗೆ ಸದಭಿರುಚಿಯನ್ನು ಬೆಳೆಸಲು ಪಾಲಕರೊಂದಿಗೆ ಮಕ್ಕಳ ಭಾಗವಹಿಸುವಿಕೆಯಿಂದ ಹೆಚ್ಚಿನ ಬಾಂಧವ್ಯ ವೃದ್ಧಿಯಾಗುತ್ತದೆ” ಎಂದರು. ಹಾಗೂ ಕ್ರೀಡಾಳುಗಳಿಗೆ ಶುಭಹಾರೈಸಿದರು.

ಅತಿಥಿಗಳಾದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನಕರ್ ಶೆಟ್ಟಿ ಅವರು ಮಾತನಾಡಿ, ಜೀವನದಲ್ಲಿ ಸೋಲನ್ನು ಸವಾಲಾಗಿ ಸ್ವೀಕರಿಸಿ ಮುನ್ನುಗುತ್ತಿರುವ ಶಾಲಾ ಸಂಚಾಲಕರ ಕಾರ್ಯ ವೈಖರಿಯನ್ನು ಹುರಿದುಂಬಿಸಿ ಶ್ಲಾಘಿಸಿದರು.

ಹಾಗೆಯೇ ಮನೋಜ್ ನಾಯರವರು ಮಾತನಾಡಿ “ಮಕ್ಕಳಿಗೆ ತಮ್ಮ ಪಾಲಕರ ಸಾಧನೆಯು ದಾರಿದೀಪವಾಗಲಿ “ಎಂದು ಹಾರೈಸಿದರು.

ಅಧ್ಯಕ್ಷೀಯ ಮಾತುಗಳನ್ನಾಡಿದ ಸಂತೋಷ ಶೆಟ್ಟಿ ಅವರು “ಕ್ರೀಡಾ ನಿಯಮಗಳನ್ನು ಸರಿಯಾಗಿ ಪಾಲಿಸುವ ಮೂಲಕವಾಗಿ ಕಾರ್ಯಕ್ರಮದ ಯಶಸ್ವಿಗೆ ಕಾರಣೀಭೂತರಾಗಿ” ಎಂದು ಕ್ರೀಡಾಳುಗಳಿಗೆ ಮನವರಿಕೆ ಮಾಡಿದರು.

ಎರಡನೇ ದಿನದ ಸಭಾ ಕಾರ್ಯಕ್ರಮದಲ್ಲಿ ಗೌತಮ್ ಶೆಟ್ಟಿ ಟಾಪರ್ ಡೂಸ್ ಕ್ರಿಕೆಟ್ ಕ್ಲಬ್ ಕುಂದಾಪುರ , ಬಸ್ರೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಯುತ ದಿನಕರ್ ಶೆಟ್ಟಿ ಹಾಗೂ ದೇವಾನಂದ ಶೆಟ್ಟಿ ಪಿಡಬ್ಲ್ಯೂಡಿ ಕಂಟ್ರಾಕ್ಟರ್ ಉಪಸ್ಥಿತರಿದ್ದರು.

ಸ್ಪರ್ಧೆಯಲ್ಲಿ 10 ತಂಡಗಳು ತಂಡಗಳು ಭಾಗವಹಿಸಿದ್ದು, ಸಂಪತ್ ಶೆಟ್ಟಿಯವರ ಮಾಲಕತ್ವದ ಶಾರದಾ ಪವರ್ ನಾಮಾಂಕಿತ ತಂಡವು ವಿಜಯಭೇರಿ ಗಳಿಸಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿತು. ಶಾರದಾ ಕಿಂಗ್ಸ್ ನಾಮಾಂಕಿತ ತಂಡವು ಜಾವೆದ್ ಕಲಿಫ್ ಅವರ ಮಾಲಕತ್ವದ ತಂಡವು ರನ್ನರಪ್ ಆದರು. ಜಯಂತ್ ಬಳ್ಕೂರ್ ಅವರು ಸರಣಿ ಶ್ರೇಷ್ಠರಾಗಿ ಹೊರಹೊಮ್ಮಿದರು.

Related Articles

Back to top button