ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ
Views: 21
ಕನ್ನಡ ಕರಾವಳಿ ಸುದ್ದಿ: ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬಿಂಬ 2.0 2k25 ವಿಶಿಷ್ಟ ವಿನೂತನ ಕಾರ್ಯಕ್ರಮದಡಿಯಲ್ಲಿ ಬ್ರಹ್ಮಶ್ರೀ ಎಜುಕೇಶನ್ ಟ್ರಸ್ಟ್ ವತಿಯಿಂದ ನಡೆಸಲಾಗುತ್ತಿರುವ ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವು ನವೆಂಬರ್ 15 ಶನಿವಾರ ಶಾಲಾ ಆವರಣದಲ್ಲಿ ಅದ್ದೂರಿಯಾಗಿ ನೆರವೇರಿತು.
ಕಾರ್ಯಕ್ರಮವನ್ನು ಪ್ರಾರ್ಥನೆಯೊಂದಿಗೆ ಆರಂಭಿಸಲಾಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಹರಿಪ್ರಸಾದ್, ಮುಖ್ಯ ಸಂಪಾದಕರು, ನ್ಯೂಸ್-18 ಬೆಂಗಳೂರು , ಶ್ರೀ ಲೋಕೇಶ್ ಡಿ.ಡಿ.ಪಿ ಉಡುಪಿ, ಶ್ರೀ ನಸೀರ್ ಹುಸೇನ್ ಉಪ ನಿರೀಕ್ಷಕರು ಕಂಡ್ಲೂರು ,ಹಾಗೂ ಶಾಲಾ ಸಂಚಾಲಕರಾದ ಶ್ರೀ ಸಂತೋಷ್ ಶೆಟ್ಟಿ, ಆಡಳಿತ ಅಧಿಕಾರಿಯಾದ ಶ್ರೀಮತಿ ಆಶಾ ಶೆಟ್ಟಿ, ಶಾಲಾ ನಾಯಕನಾದ ಪೃಥ್ವಿರಾಜ್ ಉಪಸ್ಥಿತರಿದ್ದರು.
2024 -25 ರ ಸಾಲಿನಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ ಜೆ.ಯೋಗಿತಾ ಉಡುಪ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಹಾಗೂ ಕರಾಟೆ ಸ್ಪರ್ಧೆಯಲ್ಲಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಮಾಸ್ಟರ್ ಪೃಥ್ವಿರಾಜ್ ಮತ್ತು ಮಾಸ್ಟರ್ ನೌಮನ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ರೇಷ್ಮಾ ಅಡಪ ಅವರು ಶಾಲೆಯ ವಾರ್ಷಿಕ ವರದಿಯನ್ನು ಮಂಡಿಸಿದರು.
ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ಶ್ರೀಯುತ ಸಂತೋಷ್ ಶೆಟ್ಟಿ ಅವರು ಶಾಲೆಯ ಬೆಳವಣಿಗೆಗಳು ,ಸುಧಾರಣೆಗಳು ಹಾಗೂ ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡಿ, ಮುಂದಿನ ದಿನಗಳಲ್ಲಿ ಶಾಲೆಯಲ್ಲಿ ಇನ್ನಷ್ಟು ಪ್ರಗತಿ ತರಲು ಬದ್ಧರಾಗಿರುವುದಾಗಿ ಹೇಳಿದರು.
ನಸೀರ್ ಹುಸೇನ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಬ್ರಹ್ಮಶ್ರೀ ಎಜುಕೇಶನ್ ಟ್ರಸ್ಟ್ ಕಾರ್ಯಕ್ರಮವನ್ನು ವಿಶಿಷ್ಟವಾಗಿ ನಡೆಸಿಕೊಂಡು ಬರುತ್ತಿದ್ದು ,ವಿದ್ಯಾರ್ಥಿಗಳಿಗೆ ಉತ್ತಮವಾದ ಶಿಕ್ಷಣ ಒದಗಿಸುತ್ತಿದೆ ಎಂದು ಪ್ರಶಂಸಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಹರಿಪ್ರಸಾದ್ ಅವರು ಶಾಲೆಯ ಶಿಸ್ತು, ಶಿಕ್ಷಣದ ಗುಣಮಟ್ಟ ಮತ್ತು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಅವಕಾಶಗಳನ್ನು ಪ್ರಶಂಸಿಸಿ ಶಾಲೆ ಇನ್ನಷ್ಟು ಎತ್ತರಕ್ಕೆ ಏರಲೆಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ ದಾನಿಗಳಾದ ಶ್ರೀ ಸಲ್ಮಾನ್ ರಾಜ್, ಶ್ರೀ ಸಂಪತ್ ಶೆಟ್ಟಿ ,ಶ್ರೀ ಪ್ರೇಮ್,ಶ್ರೀನಿಧಿ ಗೋಲ್ಡ್ ಅಂಡ್ ಜುವೆಲರಿ ,ಮೊಹಮ್ಮದ್ ಗೌಸ್ ಯಕ್ಷಗಾನ ಕಲಾವಿದರು. ಇವರೆಲ್ಲರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.
ವಿದ್ಯಾರ್ಥಿಗಳು ಬಣ್ಣ ಬಣ್ಣದ ಉಡುಪುಗಳನ್ನು ಧರಿಸಿ ನೃತ್ಯ, ನಾಟಕ ,ಯಕ್ಷಗಾನದ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸಿ ಎಲ್ಲರ ಮನ ಸೆಳೆದರು.ಮಕ್ಕಳ ಆಕರ್ಷಕ ತಾಳ -ಲಯ,ನಗು- ಮುಖದ ಪ್ರದರ್ಶನಗಳು ಕಾರ್ಯಕ್ರಮಕ್ಕೆ ವಿಶೇಷ ಹಿರಿಮೆಯನ್ನು ನೀಡಿತು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ/ ಶಿಕ್ಷಕೇತರ ವೃಂದ, ಪೋಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಹ ಶಿಕ್ಷಕಿಯರಾದ ಪ್ರಿಯ ಹಾಗೂ ವನಿತಾ ಕಾರ್ಯಕ್ರಮವನ್ನು ನಿರೂಪಿಸಿ , ಶ್ವೇತಾ ಸ್ವಾಗತಿಸಿ ನೂತನ ವಂದನಾರ್ಪಣೆಗೈದರು.










