ಶಿಕ್ಷಣ

ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆಯ ಪೃಥ್ವಿರಾಜ್ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆ.

ಜಿಲ್ಲಾಮಟ್ಟದಲ್ಲಿ ಕಂಗೊಳಿಸಿದ ಪ್ರತಿಭೆ - ರಾಷ್ಟ್ರೀಯ ಮಟ್ಟದ ವೇದಿಕೆಗೆ ಪಾದಾರ್ಪಣೆ.

Views: 7

ಕನ್ನಡ ಕರಾವಳಿ ಸುದ್ದಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಚಿಕ್ಕಬಳ್ಳಾಪುರದಲ್ಲಿ ಆಯೋಜಿಸಿದ 17ರ ವಯೋಮಿತಿಯ (ಬಾಲಕರ 74 ಕೆಜಿ ವಿಭಾಗ) ಕರಾಟೆ ಚಾಂಪಿಯನ್ ಶಿಪ್ ನಲ್ಲಿ 10ನೇ ತರಗತಿಯ ವಿದ್ಯಾರ್ಥಿ ಮಾಸ್ಟರ್ ಪೃಥ್ವಿರಾಜ್ ಚಿನ್ನದ ಪದಕ ಗೆದ್ದು ಮಹಾರಾಷ್ಟ್ರದ ಪುಣೆಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್ ಗೆ ಆಯ್ಕೆ ಆಗಿರುತ್ತಾರೆ.

ಕರಾಟೆ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬಂದ ಪ್ರತಿಭಾವಂತ ವಿದ್ಯಾರ್ಥಿಗಳ ಮಧ್ಯೆ ಕಠಿಣ ಸ್ಪರ್ಧೆಯಲ್ಲಿ ಅವರು ತಮ್ಮ ಶಕ್ತಿ ವೇಗ ಮತ್ತು ನೈಪುಣ್ಯದಿಂದ ತೀರ್ಪು ಗಾರರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪೂರ್ವದಲ್ಲಿಯೂ ಜಿಲ್ಲೆ ಮತ್ತು ರಾಜ್ಯಮಟ್ಟದ ಹಲವು ಪಂದ್ಯಗಳಲ್ಲಿ ಪದಕಗಳನ್ನು ಗೆದ್ದ ವಿದ್ಯಾರ್ಥಿಯ ಸಾಧನೆ ಶಾಲೆಯ ತರಬೇತಿ ಮತ್ತು ಮಾರ್ಗದರ್ಶನದ ಫಲವಾಗಿದೆ. 

ಈ ಮೂಲಕ ಶಾಲೆಯ ಕೀರ್ತಿಯನ್ನು ರಾಜ್ಯ ಮಟ್ಟದಿಂದ ರಾಷ್ಟ್ರಮಟ್ಟಕ್ಕೆ ಕೊಂಡೊಯ್ದ ವಿದ್ಯಾರ್ಥಿಗೆ ಶಾಲಾ ಸಂಚಾಲಕರಾದ ಶ್ರೀಯುತ ಸಂತೋಷ್ ಶೆಟ್ಟಿ ಅವರು ಸಂತಸ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ .ಹಾಗೂ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಯರು ,ಬೋಧಕ/ ಬೋಧಕೇತರ ವರ್ಗದವರು ರಾಷ್ಟ್ರೀಯ ಮಟ್ಟದಲ್ಲೂ ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸಿದ್ದಾರೆ.

Related Articles

Back to top button