ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆಯ 2025-26ನೇ ಸಾಲಿನ ವಾರ್ಷಿಕ ಕ್ರೀಡೋತ್ಸವ.
" ಕ್ರೀಡಾಂಗಣದಲ್ಲಿ ಹೆಜ್ಜೆ ಹಾಕಿದ ಕ್ಷಣದಿಂದಲೇ ನೀನು ಗೆದ್ದವ".
Views: 40
ಕನ್ನಡ ಕರಾವಳಿ ಸುದ್ದಿ: ಬಸ್ರೂರು ಶ್ರೀ ಶಾರದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಕ್ಟೋಬರ್ 24 ,25 ರಂದು ವಾರ್ಷಿಕ ಕ್ರೀಡೋತ್ಸವವನ್ನು ಭವ್ಯವಾಗಿ ಆಚರಿಸಲಾಯಿತು.
ದಿನದ ಪ್ರಮುಖ ಆಕರ್ಷಣೆಯಾಗಿ ಕ್ರೀಡಾ ಜ್ಯೋತಿಯನ್ನು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಶಾಲೆಯ ಕ್ರೀಡಾಪಟುಗಳು ಮೆಲುನಡಿಗೆಯ ಮೂಲಕ ಶಾಲೆಗೆ ತಂದರು.
ವಿದ್ಯಾರ್ಥಿಗಳು ಪಥಸಂಚಲನವನ್ನು ಮಾಡಿ ಕ್ರೀಡೋತ್ಸವದ ಮೆರುಗನ್ನು ಇನ್ನಷ್ಟು ಹೆಚ್ಚಿಸಿದರು.
ಕ್ರಿಡೋತ್ಸವದ ಆರಂಭದಲ್ಲಿ ಕ್ರೀಡಾ ಧ್ವಜವನ್ನು ಶಾಲಾ ಸಂಚಾಲಕರಾದ ಶ್ರೀಯುತ ಸಂತೋಷ್ ಶೆಟ್ಟಿ ಅವರ ನೇತತ್ವದಲ್ಲಿ ಏರಿಸಿ ಉತ್ಸವಕ್ಕೆ ಚಾಲನೆ ನೀಡಿದರು. ಧ್ವಜಾರೋಹಣದೊಂದಿಗೆ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಶಾಲಾ ಪೋಷಕರ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಪ್ರೇಮ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಕ್ರೀಡೆ ಮಾನವನ ಜೀವನದಲ್ಲಿ ದೈಹಿಕ ಆರೋಗ್ಯಕ್ಕೆ ಅತಿ ಮುಖ್ಯವಾದದ್ದು ಕ್ರೀಡೆಯಲ್ಲಿ ಎಲ್ಲರೂ ಭಾಗವಹಿಸಿ ಎಂದು ಪ್ರೋತ್ಸಾಹಿಸಿದರು. ಹಾಗೆ ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ ಶಾಲಾ ಪೋಷಕ ಸಮಿತಿಯ ಕಾರ್ಯದರ್ಶಿಯಾದ ಶ್ರೀಯುತ ದಿನೇಶ್ ಆಚಾರ್ಯ ಅವರು ” ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ಸಾಧನೆಯ ಬಗ್ಗೆ ಗುರುತಿಸಲು ಇಂತಹ ಕ್ರೀಡೆಯಿಂದ ಸಾಧ್ಯ” ಎಂದು ತಿಳಿಸಿದರು. ಹಾಗೆ ಶ್ರೀಯುತ ಸಂತೋಷ್ ಶೆಟ್ಟಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ “ಭಾಗವಹಿಸುವಿಕೆ ಮುಖ್ಯ,ಬಹುಮಾನ ಮುಖ್ಯವಲ್ಲ”.ಎಂದು ಹಾಗೆ ಜಾಗರೂಕತೆಯಿಂದ ಆಟವಾಡಿ ಎಂದು ತಿಳಿ ಹೇಳಿದರು.
ನಂತರ ಓಟದ ಸ್ಪರ್ಧೆ, ಉದ್ದ ಜಿಗಿತ, ಚೆಂಡೆಸೆತ, ಮುಂತಾದ ಸ್ಪರ್ಧೆಯನ್ನು ನಡೆಸಲಾಯಿತು.
ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಸಾಧನೆ ಶಿಸ್ತಿನ ಮತ್ತು ತಂಡ ಭಾವನೆಯ ಮಹತ್ವವನ್ನು ನೆನಪಿಸಿಕೊಡಲಾಯಿತು, ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳ ಸಹಕಾರದಿಂದ ಕ್ರೀಡೋತ್ಸವ ಯಶಸ್ವಿಯಾಗಿ ಮುಕ್ತಾಯಗೊಂಡಿತು.
ಕ್ರೀಡೋತ್ಸವದಲ್ಲಿ ಶಾಲಾ ಆಡಳಿತ ಅಧಿಕಾರಿಯದ ಶ್ರೀಮತಿ ಆಶಾ ಶೆಟ್ಟಿ ಹಾಗೂ ಶಿಕ್ಷಕ/ ಶಿಕ್ಷಕೇತರ ವೃಂದದವರು ಹಾಗೂ ಪೋಷಕರು ಉಪಸ್ಥಿತರಿದ್ದರು. ಸಹ ಶಿಕ್ಷಕಿಯರಾದ ನೂತನ ಕಾರ್ಯಕ್ರಮವನ್ನು ನಿರೂಪಿಸಿ ಪ್ರಾಂಶುಪಾಲಾರದ ಶ್ರೀಮತಿ ರೇಷ್ಮ ಅಡಪ ರವರು ಸ್ವಾಗತಿಸಿ, ಸಹಶೀಕ್ಷಕಿ ವೀಣಾ ವಂದನಾರ್ಪಣೆ ಗೈದರು.









