ಜನಮನ

ಬಜಪೆ: 5ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದ ಆರೋಪಿ;ಪೋಲೀಸ್ ವಶಕ್ಕೆ 

Views: 0

ಬಜಪೆ ಪೊರ್ಕೋಡಿ ದೇವಸ್ಥಾನದ ಕರೋಡಿ ಎಂಬಲ್ಲಿರುವ ಮನೆಯ ಬೆಡ್‌ ರೂಮಿನಲ್ಲಿದ್ದ ಕಬ್ಬಿಣದ ಕಪಾಟಿನ ಮಿನಿಲಾಕರ್‌ ನ್ನು ಮುರಿದು ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳವಾಗಿರುವ ಬಗ್ಗೆ ಬಜಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ಕೇಸು ದಾಖಲಾಗಿರುತ್ತದೆ.

ಈ ಪ್ರಕರಣದಲ್ಲಿ ಗುಮಾನಿತ ವ್ಯಕ್ತಿಯಾದ ಬಜಪೆಯ ತಾರೀಕಂಬ್ಳ ನಿವಾಸಿ ವಿನ್ಸೆಂಟ್‌ ಡಿ’ಸೋಜಾ (34) ಎಂಬವರನ್ನು ಬಜಪೆ ಪೊಲೀಸ್‌ ನಿರೀಕ್ಷಕಪ್ರಕಾಶ್‌ ರವರ ತಂಡ ಸೆ.4ರಂದು ಮಧ್ಯಾಹ್ನ ಬಜಪೆಯ ಕಿನ್ನಿಪದವು ಚೆಕ್‌ ಪೋಸ್ಟ್‌ ಬಳಿ ವಶಕ್ಕೆ ಪಡೆದುಕೊಂಡು ,ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ಒಟ್ಟು 80 ಗ್ರಾಂ ತೂಕದ ಚಿನ್ನಾಭರಣಗಳನ್ನು (ಚಿನ್ನದ ಕರಿಮಣಿ ಸರ, ಬಿಳಿ ಬಣ್ಣದ ಹರಳುಗಳಿಂದ ಕೂಡಿರುವ ಚಿನ್ನದ ನೆಕ್ಲೆಸ್‌, ಚಿನ್ನದ ಬಳೆಗಳು-2, ಚಿನ್ನದ ಉಂಗುರಗಳು-3, ಒಂದು ಜೊತೆ ಚಿನ್ನದ ಕಿವಿ ಒಲೆ ಮತ್ತು ಒಂದು ಜತೆ ಚಿನ್ನದ ಜುಮುಕಿ) ವಶಪಡಿಸಿಕೊಂಡಿರುತ್ತಾರೆ.

Related Articles

Back to top button
error: Content is protected !!