ಜನಮನ

ಫೋಟೋ ತೆಗೆಯುವ ವೇಳೆ ನದಿಗೆ ಬಿದ್ದ ನವದಂಪತಿ : ರಕ್ಷಣೆಗೆ ತೆರಳಿದ ಸಂಬಂಧಿಕನು ಸೇರಿ ಮೂವರು ಸಾವು

Views: 0

ಫೋಟೋ ತೆಗೆಯಲು ನದಿ ತೀರಕ್ಕೆ ತೆರಳಿದ ನವದಂಪತಿ ಹಾಗೂ ಅವರ ರಕ್ಷಣೆಗೆಂದು ತೆರಳಿದ ಸಂಬಂಧಿಕನು ನದಿಗೆ ಬಿದ್ದು ಮೃತಪಟ್ಟ ಘಟನೆ ತಿರುವನಂತಪುರದಲ್ಲಿರುವ ಪಳ್ಳಿಕಲ್ ನದಿಯಲ್ಲಿ ನಡೆದಿದೆ.

ಸಿದ್ಧಿಕ್ (28) ನೌಶಾದ್( 21) ಹಾಗೂ ಸಂಬಂಧಿ ಅನ್ವಲ್ ಖಾನ್ (19)ಮೃತಪಟ್ಟವರು.

ಕೆಲವು ದಿನಗಳ ಹಿಂದೆ ಸಿದ್ದಿಕ್ – ನೌಶಾದ್ ವಿವಾಹ ನಡೆದಿತ್ತು. ಇವರ ಸಂಬಂಧಿ ಅವರ ಮನೆಗೆ ತೆರಳಿದ್ದರು ಇದೇ ವೇಳೆ ನದಿ ತೀರ ಪ್ರದೇಶಕ್ಕೆ ಸುತ್ತಾಟಕ್ಕಾಗಿ ಸಂಬಂಧಿ ಅನ್ವಲ್ ಅವರೊಂದಿಗೆ ನವದಂಪತಿ ತೆರಳಿದ್ದಾರೆ.

ಈ ವೇಳೆ ಸಿದ್ದಿಕ್- ನೌಶಾದ್ ಫೋಟೋಕ್ಕೆ ಪೋಸ್ ಕೊಟ್ಟಿದ್ದಾರೆ. ಇನ್ನೂ ಹೆಚ್ಚಿನ ಫೋಟೋ ಕ್ಲಿಕ್ಕಿಸುವಾಗ ಬಂಡೆಯಿಂದ ಜಾರಿ ನದಿಗೆ ಬಿದ್ದಿದ್ದಾರೆ. ಈ ವೇಳೆ ಅಲ್ಲಿಯೆ ಇದ್ದ ಅನ್ವಲ್ ಅವರಿಬ್ಬರನ್ನು ರಕ್ಷಣೆಗೆಂದು ನದಿಗೆ ಹಾರಿದ್ದಾನೆ. ದುರಾದೃಷ್ಟವಶಾತ್ ಮೂವರು ನೀರಿನ ಸೆಳೆತಕ್ಕೆ ಪ್ರಾಣ ತೆತ್ತಿದ್ದಾರೆ.

ಅಗ್ನಿಶಾಮಕ ದಳ ಮತ್ತು ಸ್ಥಳೀಯರು ಸೇರಿ ಮೃತದೇಹವನ್ನು ಹೊರತೆಗೆದಿದ್ದಾರೆ ಎಂದು ತಿಳಿದು ಬಂದಿದೆ.

Related Articles

Back to top button
error: Content is protected !!