ಇತರೆ
ಪ್ರೈಓವರ್ ನಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಮೂರು ಮೃತದೇಹಗಳು ಪತ್ತೆ!
Views: 146
ಕನ್ನಡ ಕರಾವಳಿ ಸುದ್ದಿ: ಪಶ್ಚಿಮ ದಿಲ್ಲಿಯ ಪೀರಗಢಿ ಪ್ರೈಓವರ್ ನಲ್ಲಿ ರವಿವಾರ ನಿಲ್ಲಿಸಿದ್ದ ಕಾರೊಂದರಲ್ಲಿ ಮೂವರ ಮೃತದೇಹಗಳು ಪತ್ತೆಯಾಗಿವೆ.
ಎತ್ತರದ ರಸ್ತೆಯಲ್ಲಿ ಶಂಕಾಸ್ಪದವಾಗಿ ವಾಹನವೊಂದನ್ನು ನಿಲ್ಲಿಸಿರುವ ಕುರಿತು ಅಗ್ನಿ ಶಾಮಕ ದಳ ಕರೆ ಸ್ವೀಕರಿಸಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.
ಅಗ್ನಿ ಶಾಮಕ ದಳದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದಾಗ ಅಲ್ಲಿ ಕಾರೊಂದು ನಿಲ್ಲಿಸಿರುವುದು ಕಂಡು ಬಂತು. ಕಾರನ್ನು ಒಳಗಿನಿಂದ ಲಾಕ್ ಮಾಡಲಾಗಿತ್ತು. ಅದರ ಒಳಗಡೆ ಮೂವರ ಮೃತದೇಹಗಳು ಕಂಡು ಬಂತು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದಾರೆ.






